Site icon Suddi Belthangady

ಬೆಳ್ತಂಗಡಿ: ಗ್ಯಾರೇಜ್ ಮಾಲಕರ ಸಂಘದ ಮಾಸಿಕ ಸಭೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ರಿ. ಮಂಗಳೂರು, ದ.ಕ ಮತ್ತು ಉಡುಪಿ ಜಿಲ್ಲೆ, ಬೆಳ್ತಂಗಡಿ ವಲಯ ಇದರ ಮಾಸಿಕ ಸಭೆಯು ಫೆ.23ರಂದು ಮಡಂತ್ಯಾರ್ ನ ಬಸವನಗುಡಿ ಹತ್ತಿರದ ಗಣಮನಿ ಸರ್ವಿಸ್ ಸ್ಟೇಷನ್ನಲ್ಲಿ ನಡೆಯಿತು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಸುರೇಶ್ ರವರು ನೆರವೇರಿಸಿದರು. ಈ ಸಭೆಯ ಮುಖ್ಯ ಅತಿಥಿಯಾಗಿ ಉದ್ಯಮಿ ಜಯಂತಿ ಶೆಟ್ಟಿ ಮಡಂತ್ಯಾರು ಪದ್ಮನಾಭ ಸಾಲಿಯನ್ ಉಪಸ್ಥಿತರಿದ್ದರು.

ಈ ಸಭೆಯ ಅಧ್ಯಕ್ಷತೆಯನ್ನು ಮಂಗಳೂರಿನ ಗ್ಯಾರೇಜ್ ಮಾಲಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು ಅಧ್ಯಕ್ಷತೆಯನ್ನು ವಹಿಸಿದ್ದರು. ಮತ್ತು ಅಭಿಜಿತ ಜಿಲ್ಲಾ ಸಂಘದ ಚೇರ್ಮನ್ ದಿವಾಕರ್ ಉಪಸ್ಥಿತರಿದ್ದರು. ಹಾಗೂ ವಲಯ ಅಧ್ಯಕ್ಷರು ವಿ ಎಸ್ ಬಾಬುರಾಜ್ ಮತ್ತು ನಿಕಟಪೂರ್ವ ಅಧ್ಯಕ್ಷರು ಪೂವಪ್ಪ ಗೌಡ ಉಜಿರೆ ಮತ್ತು ಗೋಪಾಲ್ ಶೆಟ್ಟಿ ಮಡಂತ್ಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಸಂಘದ ಕೋಶ ಅಧಿಕಾರಿ ರಾಜಗೋಪಾಲ್ ಮತ್ತು ಜೊತೆ ಕಾರ್ಯದರ್ಶಿ ಕಿರಣ್ ರಾಜ್ ಸಭೆಯಲ್ಲಿ ಉಪಸ್ಥಿತರಿದ್ದರು, ಕೋಶಧಿಕಾರಿ ಉಮೇಶ್ ಶೆಟ್ಟಿ, ಮಂಜುನಾಥ್ ಪಟ್ರಮೆ, ವಾಮನಾಚಾರ್, ತಿಲಕ್ ರಾಜ್, ಯೋಗೀಶ್ ಆಚರ್, ರಮೇಶ್ ಲಾಯಿಲ, ಕೇಶವ ಪೂಜಾರಿ, ಶಂಕರ ಶೆಟ್ಟಿ ಹಾಗೂ ಇನ್ನಿತರ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಸಭೆಯ ಸ್ವಾಗತವನ್ನು ವಲಯದ ಕಾರ್ಯದರ್ಶಿ ಪುರಂದರ ಹೆಗ್ಡೆ ನೆರವೇರಿಸಿದರು. ಸಭೆಯನ್ನು ಉದ್ದೇಶಿಸಿ ಉದ್ಯಮಿ ಜಯಂತ್ ಶೆಟ್ಟಿ ಅವರು ಗ್ಯಾರೇಜ್ ಮಾಲಕರಿಗೆ ಮತ್ತು ಕಾರ್ಮಿಕರಿಗೆ ಆಗುವ ‘ಒಡಕುಗಳು ಮತ್ತು ತೊಂದರೆಗಳ ಬಗ್ಗೆ’ ವಿವರಣೆ ನೀಡಿದರು.ಇನ್ನೋರ್ವ ಮುಖ್ಯ ಅತಿಥಿ ಪದ್ಮನಾಭ ಸಾಲಿಯಾನ್ ರವರು ಮಾತಾಡಿ ‘ಸಂಘ ಈಗ ಬೆಳೆದಿದೆ ಇನ್ನೂ ಗಟ್ಟಿಯಾಗಿ ಎತ್ತರಕ್ಕೆ ಬೆಳೆಯಲಿ’ ಎಂದು ಹಾರೈಸಿದರು.

ಸಂಘದ ಚೇರ್ಮನ್ ಆದ ಎಂ ದಿವಾಕರ್ ರವರು ‘ಸಂಘವು ಬೆಳೆದು ಬಂದ ದಾರಿಯನ್ನು ವಿವರಿಸಿ’ ಮನಮುಟ್ಟುವ ಹಾಗೆ ತಿಳಿ ಹೇಳಿದರು. ವಲಯ ಅಧ್ಯಕ್ಷರಾದ ವಿ ಎಸ್ ಬಾಬು ರಾಜ್ ಮಾತಾಡಿ ವಲಯದ ಮಾಲಕರು ವಾರ್ಷಿಕ ಸದಸ್ಯತನ ನೋಂದಾಯಿಸ ಕಾರ್ಮಿಕರ ನಿಧಿ ಸಂಗ್ರಹಕ್ಕೆ ಸಹಕರಿಸಬೇಕೆಂದು ಕೋರಿದರು.ಎಲ್ಲಾ ಮಡಂತ್ಯಾರ್ ನ ಗ್ಯಾರೇಜ್ ಮಾಲಕರು ಮತ್ತು ವೃತ್ತಿಬಾಂಧವರು ಈ ಸಭೆಯಲ್ಲಿ ಹಾಜರಿದ್ದರು.

ಅಧ್ಯಕ್ಷ ಜನಾರ್ಧನ್ ಅತ್ತಾವರ ಇವರು ಮಾಸಿಕ ಸಭೆಯಲ್ಲಿ ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸೌಹಾರ್ದ ಸಹಕಾರಿ ಸಂಘದ ಕುಟುಂಬ ಸದಸ್ಯರ ಶೇರ್ ಬಂಡವಾಳದ ಸಮಗ್ರ ಮಾಹಿತಿಯ ವಿವರಣೆ ನೀಡಿ ನಮ್ಮನ್ನೆಲ್ಲ ಪ್ರೋತ್ಸಾಹಿಸಿದರು. ಸೊಸೈಟಿ ನಿರ್ದೇಶಕರಾದ ಜಯಕರ ಸೋನ್ಸ್ ಮತ್ತು ಸಂಚಾಲಕರಾದ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಣೆಯನ್ನು ನಿರ್ವಹಿಸಿದರು.

ಗಣಮಣಿ ಗ್ಯಾರೇಜಿನ ಮಾಲಕರಾದ ವಿವೇಕ್ ಮತ್ತು ಮಾರುತಿ ಗ್ಯಾರೇಜಿನ ಸಂತೋಷ್ ಹೆಗ್ಡೆ ಸ್ಥಳಾವಕಾಶ ನೀಡಿ ಎಲ್ಲಾ ರೀತಿಯ ಸಹಕರಿಸಿ ಕೊಟ್ಟು ಪ್ರೋತ್ಸಾಹಿಸಿದರು ಹಾಗೂ ವಲಯ ಸದಸ್ಯತನವನ್ನು ಪಡೆದುಕೊಂಡರು. ಕಾರ್ಯಕ್ರಮ ಧನ್ಯವಾದವನ್ನೂ ಗ್ಯಾರೇಜ್ ಸಂಘದ ವಲಯದ ಉಪಾಧ್ಯಕ್ಷ ಜಗದೀಶ್ ಕುಲಾಲ್ ನೆರವೇರಿಸಿದರು.ಮಡಂತ್ಯಾರು ಗ್ಯಾರೇಜ್ ಮಾಲಕರು, ವೃತ್ತಿ ಬಾಂಧವರರು ಸಭೆಗೆ ಸಹಕರಿಸಿದರು.

Exit mobile version