ಬೆಳ್ತಂಗಡಿ: ಬಾರ್ಯ ಗ್ರಾಮ ಪಂಚಾಯತ್ ಮಟ್ಟದ ಕನಸು ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಫೆ.27ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ಮಸೂದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಏನ್.ಆರ್.ಎಲ್.ಎಂ. ಯೋಜನೆ ಬಗ್ಗೆ ಮಾಹಿತಿ ನೀಡಿದರು. ಎಂ.ಬಿ.ಕೆ. ನಿಶಾ ಒಕ್ಕೂಟದ ವರದಿ ಮಂಡನೆ ಮತ್ತು ಜಮಾ ಖರ್ಚನ್ನು ಓದಿ ಹೇಳಿದರು.ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಅವರು ಪದಗ್ರಹಣ ನಡೆಸಿಕೊಟ್ಟರು. ನಂತರ ಒಕ್ಕೂಟದ ನಿರ್ಗಮಿತ ಪದಾಧಿಕಾರಿಗಳಿಗೆ ಗಣ್ಯರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಎಸ್.ಸಿ ಸಂಘವನ್ನು ಗುರುತಿಸಿ ಸಂಘಕ್ಕೆ ಗೌರವ ಸ್ಮರಣಿಕೆ ಮತ್ತು ಸಮುದಾಯ ಬಂಡವಾಳ ನಿಧಿ ಸಾಲ ಪಡೆದು ಸ್ವಉದ್ಯೋಗ ನಡೆಸಿ ಯಶಸ್ವಿಯಲ್ಲಿರುವ ಸಂಘಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಎಂ.ಬಿ.ಕೆ.ಎಲ್. ಸಿ. ಆರ್. ಪಿ.ಗಳು ಕೃಷಿ ಸಖಿ, ಪಶು ಸಖಿ ಉಪಸ್ಥಿತರಿದ್ದರು. ಒಕ್ಕೂಟದ ಪದಾಧಿಕಾರಿ ಗೀತಾ ವಂದಿಸಿದರಿ. ಕನಿಕಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಸ್ವಸ್ತಿಕ್ ಸಂಜೀವಿನಿ ಹಾಡು ಹಾಡಿದರು.