Site icon Suddi Belthangady

ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಚಿಂತನಾ ದಿನಾಚರಣೆ

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೆ.26ರಂದು ಸ್ಕೌಟ್ ಮತ್ತು ಗೈಡ್ಸ್ ಸಂಸ್ಥಾಪಕ ಲಾರ್ಡ್ ಬೇಡನ್ ಪೊವೆಲ್ ರವರ ಜನುಮ ದಿನವನ್ನು ರಾಷ್ಟ್ರೀಯ ಚಿಂತನಾ ದಿನಾಚರಣೆಯಾಗಿ ಆಚರಿಸಲಾಯಿತು.

ಸ್ಕೌಟ್ ಗೈಡ್ಸ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಯನ್ನು ಹಾಡಿದರು.ಶಾಲಾ ಮುಖ್ಯೋಪಾಧ್ಯಾಯ ವಂ.ಫಾ.ಕ್ಲಿಫರ್ಡ್ ಪಿಂಟೋರವರು ವಿದ್ಯಾರ್ಥಿಗಳು ಸ್ಕೌಟ್ ಗೈಡ್ಸ್ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ನಡತೆ ಮತ್ತು ನಾಯಕತ್ವದ ಗುಣಗಳನ್ನು ಅಳವಡಿಸಿ ಇತರರಿಗೆ ಮಾದರಿಯಾಗಬೇಕೆಂದು ನುಡಿದು ಆಶೀರ್ವದಿಸಿದರು.

ವಿದ್ಯಾರ್ಥಿಗಳು ದೇಶ ಪ್ರೇಮವನ್ನು ಬಿಂಬಿಸುವ ಉತ್ತಮ ಮೌಲ್ಯಗಳನ್ನು ಹಾಡು, ನೃತ್ಯ ಹಾಗೂ ನಟನೆಯ ಮೂಲಕ ಪ್ರಸ್ತುತ ಪಡಿಸಿದರು.ಸ್ಕೌಟ್ ಮಾಸ್ಟರ್ ಬ್ಲೆಂಡಿನ್ ರೊಡ್ರಿಗಸ್ ಚಿಂತನಾ ದಿನಾಚರಣೆ ಮಹತ್ವವನ್ನು ತಿಳಿಸಿದರು.

ವಿದ್ಯಾರ್ಥಿಗಳಾದ ಅವಿನ್ ಎಸ್ (5ನೇ) ಸ್ವಾಗತಿಸಿ, ಸಾನ್ವಿ (9ನೇ) ವಂದಿಸಿದರು. ಚೈತನ್ಯ (9ನೇ) ಕಾರ್ಯಕ್ರಮ ನಿರೂಪಿಸಿದರು.ಕಬ್ಸ್ ಬುಲ್ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕಿಯರು ಸಹಕರಿಸಿದರು.

Exit mobile version