Site icon Suddi Belthangady

ರತ್ನಗಿರಿ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಮಹೋತ್ಸವ-ಹಸಿರುವಾಣಿ ಸಮರ್ಪಣೆ-ಪರ್ವ ತುಳುನಾಡ ದೈವಾರಾಧಕರ ಮಹಾಸಮ್ಮೇಳನ ಉದ್ಘಾಟನಾ ಸಮಾರಂಭ- ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ

ಗುರುವಾಯನಕೆರೆ: ರತ್ನಗಿರಿ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಹಸಿರುವಾಣಿ ಸಮರ್ಪಣೆ ನಡೆಯಿತು.

ಗುರುವಾಯನಕೆರೆ ಶ್ರೀ ಅಯ್ಯಪ್ಪ ನಗರದ ಅಯ್ಯಪ್ಪ ಸ್ವಾಮಿ ಮಂದಿರದ ಬಳಿ ಸತೀಶ್ ಕುಮಾರ್ ಅರಿಗ ಚಾಲನೆ ನೀಡಿದರು.

ತಾಲೂಕಿನ ವಿವಿಧ ಭಜನಾ ತಂಡಗಳಿಂದ ಭಜನಾ ಮಂಗಲೋತ್ಸವ ನಡೆಯಿತು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಲ್ಕಿ ರವಿಚಂದ್ರ ಪ್ರಭು ಬಳಗದವರಿಂದ ಭಕ್ತಿ ಗಾನ ವೈಭವ ನಡೆಯಿತು.

ಪರ್ವ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನ ಉದ್ಘಾಟನೆ: ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಹಾಸಂಸ್ಥಾನಮ್‌ನ ಶ್ರೀ ಸರಸ್ವತಿ ಸ್ವಾಮೀಜಿ ಆರ್ಶೀವಚನ ನೀಡಿದರು.ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಸಮ್ಮೇಳನವನ್ನು ಉದ್ಘಾಟಿಸಿದರು.ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಕೆ. ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.ತುಳುನಾಡ ಪಾರಂಪರಿಕ ವಸ್ತು ಪ್ರದರ್ಶನ ಮಳಿಗೆಯನ್ನು ಜನಪದ ವಿದ್ವಾಂಸ ಡಾ| ಗಣೇಶ್ ಅಮೀನ್ ಸಂಕಮಾರ್ ಉದ್ಘಾಟಿಸಿದರು.ಪರ್ವ ಸಮ್ಮಳೇನದ ಧ್ವಜಾರೋಹಣವನ್ನು ಉದ್ಯಮಿ ರಾಜೇಶ್ ಶೆಟ್ಟಿ ನೆರವೇರಿಸಿದರು. ಬೆಳ್ತಂಗಡಿ ವಿನಾಯಕ ರೈಸ್ ಮಿಲ್‌ನ ಚಂದ್ರಕಾಂತ್ ಕಾಮತ್ ಅನ್ನ ಛತ್ರ ಉದ್ಘಾಟಿಸಿದರು.ಉಗ್ರಾಣವನ್ನು ಉದ್ಯಮಿ ರಮೇಶ್ ಭಂಡಾರಿ ಅದೇಲು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಸುರ್ಯದ ಆಡಳಿತ ಮೊಕ್ತೇಸರ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್ ಹಾಗೂ ಬಳ್ಳಮಂಜ ಅನಂತೇಶ್ವರ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೆಸರಾದ ಡಾ.ಹರ್ಷ ಸಂಪಿಗೆತ್ತಾಯ , ಸತೀಶ್ ಕುಮಾರ್ ಅರಿಗ ಉಪಸ್ಥಿತರಿದ್ದರು.

ಅಧ್ಯಕ್ಷ ಸಂಪತ್ ಬಿ.ಸುರ್ವಣ, ಗೌರವಧ್ಯಕ್ಷ ಮನೋಜ್ ಕುಮಾರ್ ನೆಕ್ಕಿಲೊಟ್ಟು, ಕಾರ್ಯಾಧ್ಯಕ್ಷ ವಿಶ್ವೇಶ್ ಕಿಣಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾಮತ್ ಮಂದಾರಗಿರಿ, ಜೊತೆ ಕಾರ್ಯದರ್ಶಿಗಳಾದ ರಾಮಚಂದ್ರ ಶೆಟ್ಟಿ, ಶರಣ್ ಕುಲಾಲ್, ಉಪಾಧ್ಯಕ್ಷರುಗಳಾದ ಅಜಿತ್ ಮೋಹನ್ ಶಿವಾಜಿನಗರ, ವಸಂತ್ ಗೌಡ ನಿಸರ್ಗ, ವೆಂಕಟರಮಣ ಆಚಾರ್ಯ ರತ್ನಗಿರಿ ಹಾಗೂ ಕೋಶಾಧಿಕಾರಿ ಶ್ರೀಧರ ಹೆಗ್ಡೆ ಉಪಸ್ಥಿತರಿದ್ದರು.

Exit mobile version