Site icon Suddi Belthangady

ಬರೆಂಗಾಯ: ಕಲ್ಕುಡಗುಡ್ಡೆ ನಿವಾಸಿ ಅವಿನಾಶ್ ನೇಣು ಬಿಗಿದು ಆತ್ಮಹತ್ಯೆ

ನಿಡ್ಲೆ: ಬರೆಂಗಾಯ ಕಲ್ಕುಡಗುಡ್ಡೆ ನಿವಾಸಿ ಅವಿನಾಶ್ (23ವ) ರವರು ಫೆ.26ರಂದು ತಡ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು (ಫೆ.27) ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಇವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತರು ಅಣ್ಣ ಮೋಹನ, ಅಕ್ಕ ನಳಿನಾಕ್ಷಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version