ಕೊಲ್ಲಿ: ಸೂರ್ಯ – ಚಂದ್ರ ಜೋಡುಕರೆ ಕಂಬಳ ಸಮಿತಿ ಇದರ 26ನೇ ವರ್ಷದ ಕಂಬಳಕ್ಕೆ ಪೂಜ್ಯ ಖಾವಂದರು ಮಂಜೂರು ಮಾಡಿದ 2 ಲಕ್ಷದ ಡಿ.ಡಿಯನ್ನು ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ, ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ ಗೌಡ ಇವರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಮಿತಿ ಸ್ಥಾಪಕ ಅಧ್ಯಕ್ಷರು ಹಾಗೂ ತಾಲೂಕು ಜನ ಜಾಗೃತಿ ಅಧ್ಯಕ್ಷರು ಖಾಸಿಂ ಮಲ್ಲಿಗೆ ಮನೆ, ಕಂಬಳ ಸಮಿತಿ ಉಪಾಧ್ಯಕ್ಷರು ಸೀತಾ ರಾಮ ಗೌಡ , ಇನ್ನೋರ್ವ ಉಪಾಧ್ಯಕ್ಷರು ಹಸೈನಾರ್, ಕಾರ್ಯದರ್ಶಿ ಭರತ್ ಕುಮಾರ್, ವಲಯ ಮೇಲ್ವಿಚಾರಕಿ ಉಷಾ ಪ್ರಸಾದ್, ಸೇವಾ ಪ್ರತಿನಿಧಿ ಅನುರಾಧ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಕಂಬಳ ಸಮಿತಿ ಸದಸ್ಯರು ಉಪಸ್ಥಿತರಿದ್ದರು.