ಗುರುವಾಯನಕೆರೆ: ಕರ್ಟನ್ ಮತ್ತು ವಾಲ್ ಪೇಪರ್ ಗೆ ಹೆಸರು ವಾಸಿಯಾಗಿರುವ ಸಂಸ್ಥೆ ನಿಸರ್ಗ ಕಾರ್ಟನ್ ಇದರ ಸಹಸಂಸ್ಥೆ ನಿಸರ್ಗ ಆರ್ಕೇಡ್ ನ ಉದ್ಘಾಟನೆ ಮತ್ತು ನಿಸರ್ಗ ಮನೆಯ ಗೃಹಪ್ರವೇಶ ಫೆ.24ರಂದು ಉದ್ಘಾಟನೆ ನಡೆಯಿತು.
ಉದ್ಘಾಟನೆಯನ್ನು ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಉದ್ಘಾಟನೆ ಯನ್ನು ನೆರೆವೇರಿಸಿದರು.ಮಾತೃಪಿತೃರಾದ ಗೋಪುಸಾಲಿಯಾನ್ ಮತ್ತು ಸುಶೀಲ ಬರಾಯ ದೀಪ ಪ್ರಜ್ವಲನೆ ಮಾಡಿದ್ದರು
ಇನ್ನೂ ಗುರುವಾಯನಕೆರೆಯ ಮುಂಭಾಗದಲ್ಲಿ ನಿರ್ಮಿಸಿರುವ ಮೂರು ಅಂತಸ್ತಿನ ಕಟ್ಟಡಕ್ಕೆ ಉತ್ತಮ ವಿನ್ಯಾಸ ಮಾಡಲಾಗಿದೆ.
ಮೊದಲ ಹಾಗೂ ಎರಡನೇ ಮಹಡಿಯಲ್ಲಿ ವಿವಿಧ ಉದ್ಯಮಕ್ಕೆ ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಲಾಗಿದೆ.ಈಗಾಗಲೇ ಬಾಡಿಗೆಗೆ ಅಂಗಡಿ ಕೋಣೆಗಳ ಬುಕ್ಕಿಂಗ್ ಪೂರ್ಣಗೊಂಡಿದೆ.ಮೂರನೇ ಮಹಡಿಯಲ್ಲಿ ನಿಸರ್ಗ ಮನೆ ನಿರ್ಮಿಸಿದ್ದು ಮನೆಯು ವಾಸ್ತು ಹಾಗೂ ವಿವಿಧ ವಿನ್ಯಾಸದಿಂದ ಕೂಡಿದ್ದು ಗಮನ ಸೆಳೆಯಲಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ನಿವೃತ ಎಸ್.ಪಿ ಪೀತಾಂಬರ ಹೇರಾಜೆ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ, ಮಾಜಿ ಸದಸ್ಯೆ ಮಮತಾ ಎಂ ಶೆಟ್ಟಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕ ನಾರಾಯಣ ಪೂಜಾರಿ, ತಾ.ಪಂ ಸದಸ್ಯ ಗೋಪಿನಾಥ ನಾಯಕ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಚಂದ್ರಹಾಸ, ಕಿರಾತಮೂರ್ತಿ ದೇವಸ್ಥಾನದ ಟ್ರಸ್ಟ್ ದಿನೇಶ್, ನಿವೃತ ಮುಖ್ಯೋಪಾಧ್ಯಾಯ ಗೋಪಾಲ್ ಪೂಜಾರಿ, ಸುದ್ದಿ ಬಿಡುಗಡೆ ವಾರಪತ್ರಿಕೆ ವ್ಯವಸ್ಥಾಪಕ ಮಂಜುನಾಥ ರೈಯುವ ಉದ್ಯಮಿಗಳಾದ ಸಚಿನ್ ಶೆಟ್ಟಿ ಕುರೆಲ್ಯಸಾಯಿ ಶೆಟ್ಟಿ ನವಶಕ್ತಿ, ಗೋಪಾಲ ಪೂಜಾರಿ, ವಸಂತ ಪೂಜಾರಿ ಗರ್ಡಾಡಿ, ದಿನೇಶ್ ಪೂಜಾರಿ ಅಂತರ ಬಳಂಜ, ಜಗನ್ನಾಥ್ ಸುಲ್ಕೇರಿಮೊಗ್ರು, ಯುವ ಉದ್ಯಮಿ ಚಿದಾನಂದ ಇಡ್ಯ, ಆದರ್ಶ್ ಜೈನ್, ಪೋಟೋ ಅಸೋಸಿಯೇಷನ್ ದಾಮೋದರ ಕುಲಾಲ್, ರವಿ ಪೂಜಾರಿ, ವಸಂತ ಹೆಗ್ಡೆ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು.
ಗೋಪಾಲ ಪೂಜಾರಿ, ಲೋಕಮ್ಮ ಸುರೇಶ್ ಸತೀಶ್ ಪೂಜಾರಿ, ಜಗನ್ನಾಥ ಪೂಜಾರಿ, ಬೇಬಿಂದ್ರ,ಸಿಂಚನಾ, ಅನ್ವಿಸಂದ್ಯಾಅಮಿತಾ, ಸಮಿತಾ, ಮೋಹಿನಿ ಹಾಗೂ ಬಂಧು ಮಿತ್ರರು ಸಹಕರಿಸಿದರು.
ಸಂಸ್ಥೆಯ ಮಾಲಕರಾದ ನಾಗೇಶ್ ಕೋಟ್ಯಾನ್ ಮತ್ತು ಯಶ್ಮಿತಾ ನಾಗೇಶ್, ಮಕ್ಕಳಾದ ಮಾ.ಯಶ್ವಿನ್ ಎನ್, ಮಾ.ಯುವಿನ್ ಎನ್ ಅಸಗಮಿಸಿದ ಅತಿಥಿ ಗಣ್ಯರನ್ನು ಸತ್ಕರಿಸಿದರು.
ಸುದ್ದಿ ಉದಯ ವಾರಪತ್ರಿಕೆಯ ಉಪಸಂಪಾದಕ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.