Site icon Suddi Belthangady

ಧರ್ಮಸ್ಥಳ: ಶ್ರೀ.ಧ.ಮ.ಆಂ.ಮಾ ಶಾಲೆಯಲ್ಲಿ ಚಿಂತನಾ ದಿನಾಚರಣೆ

ಧರ್ಮಸ್ಥಳ: ಶ್ರೀ.ಧ.ಮ.ಆಂ.ಮಾ ಶಾಲೆಯಲ್ಲಿ ಚಿಂತನಾ ದಿನಾಚರಣೆ ಆಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸ್ಕೌಟ್ ಸಂಸ್ಥಾಪಕ ಲಾರ್ಡ್ ಬ್ಯಾಡನ್ ಪವೆಲರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಸ್ಕೌಟ್ ದಿನದ ಮಹತ್ವವನ್ನು ಮತ್ತು ಶಿಸ್ತಿನ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು.ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸರ್ವಧರ್ಮ ಪ್ರಾರ್ಥನೆಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಸ್ಕೌಟ್ ಮಾಸ್ಟರ್ ಶಶಿಕಲಾ ಹಾಗೂ ಗೈಡ್ ಕ್ಯಾಪ್ಟನ್ ಗೀತಾ, ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗೈಡ್ ವಿದ್ಯಾರ್ಥಿನಿ ಕುಮಾರಿ ಕ್ಷಮ ನಿರೂಪಿಸಿ, ಕುಮಾರಿ ಧನ್ಯ ವಂದಿಸಿದರು.

Exit mobile version