Site icon Suddi Belthangady

ಮಾ.1 ರಿಂದ ಗ್ರಾ.ಪಂ ನೌಕರರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ರಾಜ್ಯಾದ್ಯಂತ ಚಳುವಳಿ-ವಿಧಾನಸಭೆ ಸಭಾಪತಿಯವರಿಗೆ ಪತ್ರ

ಬೆಳ್ತಂಗಡಿ: ಗ್ರಾಮ ಪಂಚಾಯತ್ ನೌಕರರು ತಮಗೆ ಆಗುತ್ತಿರುವ ಶೋಷಣೆ ಮತ್ತು ಸಮಸ್ಯೆಗಳಿದ್ದ ಜನರ ಸೇವೆಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಚೇರಿಯಲ್ಲಿ ಕಪ್ಪು ಪಟ್ಟಿ ಧರಿಸಿ ಇಲಾಖೆಯಿಂದ ಬೇಡಿಕೆ ಈಡೇರುವವರೆಗೂ ಮಾರ್ಚ್ 1ರಿಂದ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ.ದೇವಿಪ್ರಸಾದ್ ಬೊಲ್ಮ ತಿಳಿಸಿದ್ದಾರೆ.

ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ಸಿಬ್ಬಂದಿ ಹಲವು ವರ್ಷಗಳಿಂದ ಸಂಘಟನೆಯ ಮೂಲಕ ಇಲಾಖೆಗೆ ಹಲವು ಬೇಡಿಕೆಗಳನ್ನು ಮಂಡಿಸುತ್ತಾ ಬಂದಿದ್ದಾರೆ.ಆದರೆ ಇಲಾಖೆಯು ನೌಕರರ ಮೂಲ ಬೇಡಿಕೆಗಳಾದ ಸಿ ಮತ್ತು ಡಿ ದರ್ಜೆಯ ಸ್ಥಾನಮಾನ, ವೇತನ ಶ್ರೇಣಿ ಆರೋಗ್ಯಭದ್ರತೆ ಅನುಮೋದನೆ ಆಗದಿರುವ ಬಗ್ಗೆ, ನೌಕರರಿಗೆ ಸೇವಾ ಭದ್ರತೆ, ಡಾಟಾ ಎಂಟ್ರಿ ಆಪರೇಟಿವ್ ಅನುಮೋದನೆ ಸಮಸ್ಯೆ, ಸಕಾಲದಲ್ಲಿ ಮುಂಬಡ್ತಿ ನಿವೃತ್ತಿಯಲ್ಲಿ ಆರ್ಥಿಕ ಭದ್ರತೆಗಳನ್ನು ಈಡೇರಿಸದೆ ನೌಕರರನ್ನು ಹಗಲಿರಲಿಸಿಕೊಳ್ಳುತ್ತಿದ್ದು ನೌಕರರು ಶೋಷಣೆಗಳಿಗಾಗುತ್ತಿದ್ದಾರೆ.ಅಲ್ಲದೆ ಆರೋಗ್ಯಭದ್ರತೆ ಇಲ್ಲದೆ ಒತ್ತಡದಿಂದ ಕಾರ್ಯನಿರ್ಸುತ್ತಿದ್ದಾರೆ ಎಂದು ರಾಜ್ಯಾಧ್ಯಕ್ಷ ದೂರಿದ್ದಾರೆ.ಗ್ರಾಮ ಪಂಚಾಯತ್ ನೌಕರರಿಗೆ ಕನಿಷ್ಠ ವೇತನದ ಬದಲು ಗ್ರಾಮೀಣ ಪಂಚಾಯತ್ ಇಲಾಖೆ ಅಡಿಯಲ್ಲಿ ಸಿ ಮತ್ತು ಡಿ ದರ್ಜೆಯ ವೇತನ ನಿಗದಿ ಪಡಿಸಬೇಕು.ಆರೋಗ್ಯ ಭದ್ರತೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು.ಅನುಮೋದನೆಯಾಗದ ಎಲ್ಲಾ ನೌಕರರಿಗೆ ಅನುಮೋದನೆ ಒದಗಿಸುವುದು ಹಾಗೂ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಮುಂಬಡ್ತಿ ನೀಡಬೇಕೆಂದು ಅವರು ಮಾನ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ರಾಜ್ಯ ಪತ್ರಿಕೆ ಪ್ರಕಟಣೆಯಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಸದ್ರಿ ವಿಷಯವು ಸಾರ್ವಜನಿಕ ವಲಯದಲ್ಲಿ ಮುಜುಗರ ತರುವ ಮಹತ್ವದ ವಿಷಯವಾಗಿದ್ದು ಉಡುಪಿ ದಕ್ಷಿಣ ಕನ್ನಡ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಶಾಸಕ ಮಂಜುನಾಥ ಭಂಡಾರಿಯವರು ಸಭಾಪತಿಯವರು ಕರ್ನಾಟಕ ವಿಧಾನ ಪರಿಷತ್ ಬೆಂಗಳೂರು ಇವರಿಗೆ ನೌಕರರ ನ್ಯಾಯದ ಬೇಡಿಕೆಯನ್ನು ಪರಿಶೀಲಿಸಲು ವಿಲಾಸ ಸಮಿತಿಯನ್ನು ನೇಮಿಸಿ ಸಮಿತಿಯ ವರದಿಯನ್ನಾದರಿಸಿ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಮಂತ್ರಿಗಳನ್ನು ಒತ್ತಾಯಿಸಲು ಸಾರ್ವಜನಿಕ ಮಹತ್ವದ ಜರೂರು ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅನುಮತಿ ಕೋರಿ ಮನವಿಯನ್ನು ನೀಡಿದ್ದಾರೆ.

Exit mobile version