ಮಾಲಾಡಿ: ಮಾಲಾಡಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವೀತಿಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ಪುನಿತ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಫೆ.22ರಂದು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ವಿದ್ಯಾ ರವರು ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು.
ಪಂಚಾಯತ್ ಉಪಾಧ್ಯಕ್ಷೆ ಸೆಲೆಸ್ಟಿನ್ ಡಿಸೋಜಾ, ಸದಸ್ಯರುಗಳಾದ ಸುಸ್ಸಾನ ಡಿಸೋಜಾ, ದಿನೇಶ್ ಕರ್ಕೇರ, ಎಸ್ ಬೇಬಿ ಸುವರ್ಣ, ಸುಧಾಕರ್ ಆಳ್ವ, ಜಯಂತಿ, ಉಮೇಶ್, ಬೆನಡಿಕ್ಟ್ ಮಿರಾಂದ, ವಸಂತ ಪೂಜಾರಿ, ತುಳಸಿ ಬಿ, ರಾಜೇಶ್, ಐರಿನ್ ಮೊರಾಸ್, ಫರ್ಜಾನ, ವಿದ್ಯಾ ಪಿ ಸಾಲಿಯಾನ್, ರುಬೀನಾ, ಗುಲಾಬಿ, ದಿನೇಶ್, ಮೆಸ್ಕಾಂ ಇಲಾಖೆಯ ಸಂತೋಷ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಮನಾ, ಅರಣ್ಯ ಇಲಾಖೆಯ ರಾಜಶೇಖರ್, ಆರೋಗ್ಯ ಇಲಾಖೆಯ ಪ್ರಿಯಾ, ಶಿಕ್ಷಣ ಇಲಾಖೆಯಿಂದ ಲತಾರವರು ಭಾಗವಹಿಸಿ ಇಲಾಖಾ ಮಾಹಿತಿ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ ಕಳೆದ ಬಾರಿಯ ಅನುಪಾಲನಾ ವರದಿ ಮತ್ತು ವಾರ್ಡ್ ಸಭೆಯ ಬೇಡಿಕೆಗಳ ಪಟ್ಟಿ, ಲೆಕ್ಕ ಪತ್ರ ಮಂಡಿಸಿದರು.
ಗ್ರಾಮ ಸಭೆಯಲ್ಲಿ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು ಭಾಗವಹಿಸಿದ್ದರು.ಕಾರ್ಯದರ್ಶಿ ಯಶೋಧರ ಶೆಟ್ಟಿ, ಸಿಬ್ಬಂದಿ ವರ್ಗದವರು ಸಹಕರಿಸಿದರು.