ಕೊಕ್ಕಡ: ನಮ್ಮೆದುರು ಯಾವುದೇ ಸಂದರ್ಭದಲ್ಲಿ ತಪ್ಪುಗಳು ನಡೆದಾಗ ಹೊಂದಾಣಿಕೆ ಮಾಡಿಕೊಳ್ಳದೆ, ರಾಜಕೀಯ ತಿರುವುಗಳನ್ನು ಪಡೆಯದೆ ತಪ್ಪನ್ನು ತಪ್ಪು ಎಂದು ಧೈರ್ಯವಾಗಿ ಹೇಳುವ ಗುಣ ಮೈಗೂಡಿಸಿಕೊಳ್ಳಬೇಕು.ಯಾರೇ ತೊಂದರೆಯಲ್ಲಿ ಸಿಲುಕಿದರು ಅವರ ಕಷ್ಟಗಳನ್ನು ತಮ್ಮ ಕಷ್ಟವೆಂದು ತಿಳಿದು ಕಾರ್ಯ ಪ್ರವೃತ್ತರಾಗುತ್ತಿರುವುದು ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ ಘಟಕದ ಸದಸ್ಯರು.ಅವರ ಸಾಮಾಜಿಕ ಕಾರ್ಯ ಇನ್ನಷ್ಟು ಬೆಳೆಯಲಿ ಎಂದು ಹಿಂ.ಜಾ.ವೇ ಮಂಗಳೂರು ಗ್ರಾಮಾಂತರದ ಸಂಚಾಲಕ ನರಸಿಂಹ ಮಾಣಿ ನುಡಿದರು.
ಹಿಂದು ಜಾಗರಣ ವೇದಿಕೆ ಶಿವಾಜಿ ಗ್ರೂಫ್ ಆಫ್ ಬಾಯ್ಸ್ ಕೊಕ್ಕಡ ಇದರ ವತಿಯಿಂದ ಕೊಕ್ಕಡದ ಶ್ರೀರಾಮ ಭಜನಾ ಮಂದಿರದಲ್ಲಿ ನಡೆದ ಸಾಮೂಹಿಕ ಶನೈಶ್ವರ ಕಲ್ಪೋಕ್ತಪೂಜೆ ಮತ್ತು ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಸೌತಡ್ಕ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣಭಟ್ ಹಿತ್ತಿಲು ಮಾತನಾಡಿ ರಾಷ್ಟೀಯ ಸ್ವಯಂ ಸೇವಕ ಸಂಘದ ತತ್ವ ಸಿದ್ದಾಂತದ ಅಡಿಯಲ್ಲಿ ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಸಾಮಾಜಿಕ ದಾರ್ಮಿಕ ಕೆಲಸವನ್ನು ಮಾಡುತ್ತಿರುವ ಸಂಘಟನೆ ಹಿಂದು ಜಾಗರಣ ವೇದಿಕೆ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಕುಶಾಲಪ್ಪ ಗೌಡ ಪೂವಾಜೆ ಹಿಂದು ಜಾಗರಣ ವೇದಿಕೆಯ ಯುವಕರು ನಮ್ಮೂರಿನ ಎಲ್ಲಾ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ ಮೊದಲಿಗರಾಗಿ ಪಾಲ್ಗೊಂಡು ಅದರ ಜೊತೆಯಲ್ಲಿ ಸಾಮೂಹಿಕ ಶನಿಶೈರ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.ಪ್ರತಿ ಮನೆಗೂ ಭೇಟಿ ನೀಡಿ ಆಮಂತ್ರಣ ನೀಡಿ ಈ ಪುಣ್ಯಕಾರ್ಯದಲಿ ಎಲ್ಲಾ ಜನರು ಭಾಗವಹಿಸಲು ಅವಕಾಶ ಮಾಡಿಕೊಂಡು ಬರುತ್ತಿದ್ದಾರೆ.ಯಾವುದೇ ಪ್ರಚಾರ ಪಡೆಯದೆ ತಮ್ಮ ಗ್ರೂಪ್ ಸದಸ್ಯರೆಲ್ಲರೂ ಸೇರಿಕೊಂಡು ಕಷ್ಟದಲ್ಲಿ ಇರುವ ಜನಗಳಿಗೆ ಕೈಲಾಗುವ ಸಹಾಯ ಮಾಡಲು ಸಹಾಯನಿಧಿ ಕೂಡ ಸಂಗ್ರಹ ಮಾಡಿತ್ತಿದ್ದಾರೆ ನಾವೆಲ್ಲರೂ ಈ ಸಂಘಟನೆಯ ಜೊತೆ ನಿಲ್ಲೋಣ ಎಂದರು.
ವೇದಿಕೆಯಲ್ಲಿ ವೇದಮೂರ್ತಿ ಬಾಲಕೃಷ್ಣ ಕೆದಿಲಾಯ, ಬಾಲಕೃಷ್ಣ ನೈಮಿಷ, ಮೋಹನದಾಸ್ ದೋಲ್ಪಾಡಿ ಉಪಸ್ಥಿತರಿದ್ದರು.
ಪ್ರಶಾಂತ್ ಪೂವಾಜೆ ಸ್ವಾಗತಿಸಿ, ಸಚಿನ್ ಬಜ ವಂದಿಸಿದರು.ಕೇಶವ ಹಳ್ಳಿಂಗೇರಿ ಕಾರ್ಯಕ್ರಮ ನಿರೂಪಿಸಿದರು.