ತಣ್ಣೀರುಪಂತ: ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 99 ಕುಟುಂಬಗಳಿಗೆ ಶೇಕಡಾ 25ರ ಪ.ಜಾ-ಪ.ಪಂಗಡ ಶ್ರೇಯೋಭಿವೃದ್ಧಿ ಅನುದಾನದಡಿ ಕುಡಿಯುವ ನೀರಿನ ಡ್ರಮ್ ವಿತರಣೆಯನ್ನು ಫೆ.15ರಂದು ಕಲ್ಲೇರಿ ಬಾಪೂಜಿ ಸೇವಾ ಕೇಂದ್ರದಲ್ಲಿ ನಡೆಯಿತು.
ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪ್ರಿಯಾ, ಸದಸ್ಯರಾದ ಜಯವಿಕ್ರಮ ಕಲ್ಲಾಪು, ಆಯ್ಯೂಬ್ ಡಿ.ಕೆ, ನಿಸಾರ್, ಲೀಲಾವತಿ, ತಾಜುದ್ದೀನ್, ನವೀನ್ ಕುಮಾರ್ ಹಾಗೂ ಅಶ್ರಫ್ ಉಪಸ್ಥಿತರಿದ್ದರು.
ಪಿಡಿಒ ಶ್ರವಣ್ ಕುಮಾರ್, ಕಾರ್ಯದರ್ಶಿ ಆನಂದ, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಮತ್ತು ಅರ್ಹ ಫಲಾನುಭವಿಗಳು ಹಾಜರಿದ್ದರು.