ಕೊಕ್ಕಡ: ಕೊಕ್ಕಡ ಸಂಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ವ್ಯಾಪ್ತಿಯ ಶ್ರೀ ದುರ್ಗಾ ಸಂಜೀವಿನಿ ಓಣಿತ್ತಾರುವಿನ ಸದಸ್ಯೆ ಕವಿತಾ ಅವರು ಮಗು ಕ್ಯಾನ್ಸರ್ ಖಾಯಿಲೆಗೆ ಒಳಗಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲಾ ಸಂಜೀವಿನಿ ಸಂಘಗಳು ಹಾಗೂ ಡಿಕೆಆರ್‌ಡಿಎಸ್ ಸಂಘದಿಂದ ಸಂಗ್ರಹಿಸಿದ ಮೊತ್ತವನ್ನು ಹಸ್ತಾಂತರಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ಕುಸುಮ, ಕಾರ್ಯದರ್ಶಿ ಹೇಮಾವತಿ, ವಲಯ ಮೇಲ್ವಿಚಾರಕರಾದ ವೀಣಾಶ್ರೀ, ಕೋಶಾಧಿಕಾರಿ ನಳಿನಿ ಹಾಗೂ ಸಂಗಮ ಹಾಳೆತಟ್ಟೆ ಉತ್ಪಾದಕ ಘಟಕದ ಅಧ್ಯಕ್ಷೆ ಅಶ್ವಿನಿ, ಉಪಸ್ಥಿತರಿದ್ದರು.