ಕೊಕ್ಕಡ : ಅಯೋಧ್ಯೆಯ ರಾಮಮಂದಿರ ನಿರ್ಮಾಣ ಸಮಯದಲ್ಲಿ ಕರಸೇವೆಗಾಗಿ ನಾನು ತೆರಳಿಲ್ಲವಾದರೂ ಕರಸೇವೆಯಲ್ಲಿ ಪಾಲ್ಗೊಂಡ ಹಲವರನ್ನು ನಾನು ಗೌರವಿಸುವ ಪುಣ್ಯ ಕಾರ್ಯದಲ್ಲಿ ಭಾಗಿಯಾದೆ.ಕೊಕ್ಕಡದ ಕೇಸರಿ ಗೆಳೆಯರ ಬಳಗವು ಉತ್ಸಾಹಿ ಯುವ ಬಳಗವಾಗಿದ್ದು ಸದಾ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದೆ ಎಂದು ಶ್ರೀ ಕ್ಷೇತ್ರ ಸೌತಡ್ಕದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ನುಡಿದರು.
ಅವರು ಫೆ. 18ರಂದು ಕೇಸರಿ ಗೆಳೆಯರ ಬಳಗ ಕೊಕ್ಕಡ ಇದರ ವತಿಯಿಂದ ಕೊಕ್ಕಡದ ಕೋರಿ ಗದ್ದೆಯಲ್ಲಿ ನಡೆದ ಅಯೋಧ್ಯ ಟ್ರೋಫಿ 2024 ರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಳೆದ ಎಂಟು ವರ್ಷಗಳಿಂದ ಯಾವುದೇ ಆಡಂಬರವಿಲ್ಲದೆ ಕೊಕ್ಕಡ ಪರಿಸರದಲ್ಲಿ ಹೆಸರು ಮಾಡಿರುವ ಕೇಸರಿ ಗೆಳೆಯರ ಬಳಗ ಇನ್ನಷ್ಟು ಕಾರ್ಯಗಳನ್ನು ಮಾಡುವಂತಾಗಲಿ.ಯುವಕರ ತಂಡಕ್ಕೆ ನಾನು ಸದಾ ಪ್ರೋತ್ಸಾಹಕನಾಗಿರುತ್ತೇನೆ ಎಂದರು.
ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ, ಯುವ ಸಂಘಟನೆಯೂ ಬಲಿಷ್ಠ ವಾದಲ್ಲಿ ಹಿಂದುತ್ವಕ್ಕೆ ಭಯವಿಲ್ಲ.ಹಿಂದುತ್ವವನ್ನ ಭದ್ರಗೊಳಿಸುವ ಮಹತ್ತರ ಜವಾಬ್ದಾರಿ ಯುವ ಪೀಳಿಗೆಯ ಕೈಯಲ್ಲಿದೆ. ಕೊಕ್ಕಡ ಕೇಸರಿ ಗೆಳೆಯರ ಬಳಗವು ಹಲವಾರು ವರ್ಷಗಳಿಂದ ಹಿಂದುತ್ವದ ನೆಲೆಗಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು ಸಮಾನ ಮನಸ್ಕರ ಯೋಚನೆಗಳು ಕೂಡ ಒಂದೇ ರೀತಿಯಲ್ಲಿವೆ ಎಂದರು.
ವೇದಿಕೆಯಲ್ಲಿ ಕೊಕ್ಕಡ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಪುರುಷೋತ್ತಮ, ಶ್ರೀ ಕ್ಷೇತ್ರ ಸೌತಡ್ಕದ ಅಡುಗೆ ತಯಾರಕ ಭೀಮ ಭಟ್ ಕೊಣಲು, ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ, ಗಿರೀಶ್, ರತ್ನಾಕರ ಭಂಡಾರಿ, ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ ಗೌಡ, ಕೇಸರಿ ಗೆಳೆಯರ ಬಳಗದ ಶರತ್, ಅಂಬಿಕ ಕ್ಲಿನಿಕ್ ನ ವೈದ್ಯ ಡಾ. ಗಣೇಶ್ ಪ್ರಸಾದ್, ರವೀಶ್, ಸಚಿನ್, ದಯಾನೀಶ್ ಉಪಸ್ಥಿತರಿದ್ದರು.
ಪಂದ್ಯಾಟವನ್ನು ಈಶ್ವರ ಭಟ್ ಹಿತ್ತಿಲು ಉದ್ಘಾಟಿಸಿದ್ದರು.ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕರಸೇವೆ ಮಾಡಿದ ಗ್ರಾಮದ ಕರಸೇವಕರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಈ ಕಾರ್ಯಕ್ರಮವನ್ನು ಕೊಕ್ಕಡ ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ಆಲಂಬಿಲ ನಿರೂಪಿಸಿದರು.
ಬೆಳ್ತಂಗಡಿ,ಪುತ್ತೂರು, ಕಡಬ, ಬಂಟ್ವಾಳ ಬಾಗದ ಸುಮಾರು ಮೂವತ್ತಕ್ಕೂ ಅಧಿಕ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದವು.
ಫಲಿತಾಂಶ: ಪ್ರಥಮ ಶ್ರೀ ಲಕ್ಷ್ಮೀ ಕೊಕ್ಕಡದ್ವಿತೀಯ ಶ್ರದ್ಧಾ ಗೆಳೆಯರ ಬಳಗ ಉಪ್ಪಾರಪಳಿಕೆ.ತೃತಿಯ ಪಂಚದುರ್ಗ ಕ್ರಿಕೆಟರ್ಸ್ ಕಕ್ಯಪದವುಚತುರ್ಥ ವೈದ್ಯನಾಥೇಶ್ವರ ಗೆಳೆಯರ ಬಳಗ ಕೊಕ್ಕಡ.