Site icon Suddi Belthangady

ಫೆ.22ರಿಂದ ಮಾ.1: ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ

ವೇಣೂರು: ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರದಲ್ಲಿ ಪ್ರತಿ ಹನ್ನೆರಡು ವರ್ಷಕೊಮ್ಮೆ ನಡೆದುಕೊಂಡು ಬರುತ್ತಿರುವ ಭಗವಾನ್ ಬಾಹುಬಲಿ ಮೂರ್ತಿಗೆ ಫೆ.22 ರಿಂದ ಮಾ.1 ರ ವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಅಳದಂಗಡಿ ಅರಮನೆಯ ಅರಸರು, ಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ.ಪದ್ಮ ಪ್ರಸಾದ್ ಅಜಿಲರು ಹೇಳಿದರು.

ಅವರು ಫೆ. 19 ರಂದು ವೇಣೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿವರ ನೀಡಿದರು.

ವೇಣೂರಿನಲ್ಲಿ 1604ರಲ್ಲಿ 35 ಅಡಿ ಎತ್ತರದ ಏಕಶಿಲಾ ಬಾಹುಬಲಿ ಮೂರ್ತಿಯನ್ನು ಅಜಿಲರಸರಾದ ತಿಮ್ಮಣ್ಣಾಜಿಲರು ಪ್ರತಿಷ್ಠಾಪಿಸಿ ಪ್ರಥಮ ಮಹಾಮಸ್ತಕಾಭಿಷೇಕ ನೆರವೇರಿಸಿದರು.ದಾಖಲೆ ಪ್ರಕಾರ 1928,1956, 2000, 2012ರಲ್ಲಿ ಜರಗಿವೆ.ಮಹಾ ಮಸ್ತಕಾಭಿಷೇಕ 9 ದಿನಗಳಲ್ಲೂ ಸಂಜೆ ಧಾರ್ಮಿಕ ಸಭೆಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡು ಸಭಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ದಿಗಂಬರ ಯುಗಳ ಮುನಿಶ್ರೀಗಳು ಭಾಗವಹಿಸಿ ಆಶೀರ್ವಚನ ನೀಡುವರು.ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಬಹಳಷ್ಟು ಭಕ್ತಾಧಿಗಳು ಆಗಮಿಸಲಿದ್ದು ಇಲ್ಲಿಯ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲಾಗಿದೆ.ಸರಕಾರದ ಅನುದಾನದಿಂದ ಕ್ಷೇತ್ರದ ಸುತ್ತಲಿನ ಸುತ್ತು ರಸ್ತೆ ಡಾಮರೀಕರಣ, ಶೌಚಾಲಯಗಳ ನಿರ್ಮಾಣ ಆಗಿದೆ.ಬೆಟ್ಟದ ಒಳಗಿನ ಅಂಗಣಕ್ಕೆ ಕಲ್ಲು ಹಾಸು ಮಾಡಲಾಗಿದೆ. ಕ್ಷೇತ್ರದ ಎಲ್ಲಾ ಕಾಮಗಾರಿಗಳ ಮತ್ತು ವ್ಯವಸ್ಥೆಗಳ ಪರಿಶೀಲನೆಯನ್ನು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಧಿಕಾರಿ, ಜಿ.ಪ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಗಮಿಸಿದ್ದಾರೆ.ಪ್ರತಿ ದಿನ ಅನ್ನದಾಸೋಹ ನಡೆಯಲಿದ್ದು 10 ರಿಂದ 20ಸಾವಿರ ಜನರ ನಿರೀಕ್ಷೆ ಇದೆ.ವಾಹನ ಪಾರ್ಕಿಂಗ್ ವ್ಯವಸ್ಥೆ ಸಂಚಾರ ನಿಯಂತ್ರಣ ವ್ಯವಸ್ಥೆಮಾಡಲಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಜಯರಾಜ ಕಂಬಳಿ ಉಪಸ್ಥಿತರಿದ್ದರು.

Exit mobile version