Site icon Suddi Belthangady

ರಾಜಕೇಸರಿ ಡ್ಯಾನ್ಸ್ ಬ್ಲಾಸ್ಟ್-ಉಜಿರೆಯ ಬಾಲ ಪ್ರತಿಭೆ ಕು.ವೈಷ್ಣವಿ ಪ್ರಥಮ

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಸಂಸ್ಥಾಪಕರಾದ ದೀಪಕ್ ಜಿ. ಇವರ ನೇತೃತ್ವದಲ್ಲಿ ನಡೆದ ಬೆಳ್ತಂಗಡಿ ಸಂಭ್ರಮದ “ರಾಜಕೇಸರಿ ಡಾನ್ಸ್ ಬ್ಲಾಸ್ಟ್-2024” ನಲ್ಲಿ ಉಜಿರೆಯ ಬಾಲಪ್ರತಿಭೆ ಕುಮಾರಿ ವೈಷ್ಣವಿ ಉಜಿರೆ ಇವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಉಜಿರೆಯ ಪೂರ್ಣಿಮಾರ ಪುತ್ರಿ ಉಜಿರೆ ಎಸ್ ಡಿಎಂ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದು, ಈಗಾಗಲೇ 250ಕ್ಕೂ ಹೆಚ್ಚು ವೇದಿಕೆಗಳಲ್ಲಿ ನೃತ್ಯ, ಹಾಡು, ಆಕ್ಟಿಂಗ್ ಪ್ರದರ್ಶನ ನೀಡಿ ಹಲವಾರು ಪ್ರಶಸ್ತಿ, ಗೌರವಗಳನ್ನು ಪಡೆದುಕೊಂಡಿದ್ದಾರೆ.

ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ನೃತ್ಯ ತರಬೇತಿ ಕೇಂದ್ರದಲ್ಲಿ ನೃತ್ಯ ತರಬೇತಿ ಪಡೆದ ವೈಷ್ಣವಿ ಉಜಿರೆ ಬಾಲ ಪ್ರತಿಭಾ ಪುರಸ್ಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪ್ರತಿಭಾ ಚೇತನಾ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

ಕರಾವಳಿಯ ಪ್ರಖ್ಯಾತ ಚಾನೆಲ್ ಗಳ ರಿಯಾಲಿಟಿ ಶೋ, ಅತಿಥಿಯಾಗಿ ಭಾಗವಹಿಸಿ ಕರಾವಳಿಯಾದ್ಯಂತ ಬಾಲಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ.ಅಲ್ಲದೆ ಹಲವಾರು ಕಿರುಚಿತ್ರ, ಆಲ್ಬಂ ಸಾಂಗ್ ಗಳಲೂ ಕೂಡಾ ನಟಿಸಿದ್ದು ಕರಾವಳಿಯ ಹಲವಾರು ಸಂಘಟನೆಗಳು ಇವರ ಪ್ರತಿಭೆಯನ್ನು ಗುರುತಿಸಿ, ಸನ್ಮಾನಿಸಿದೆ.

Exit mobile version