ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರದ ಈ ಬಾರಿಯ ಬಜೆಟ್ ಎಲ್ಲಾ ಕ್ಷೇತ್ರ,ವರ್ಗಗಳನ್ನು ಆದ್ಯತೆಯಾಗಿರಿಸಿ ನಾಡಿನ ಸರ್ವಾಂಗೀಣ ವಿಕಾಸದ ದೃಷ್ಟಿಯಿಂದ ಮಂಡಿಸಲ್ಪಟ್ಟಿದೆ.
ಸಮರ್ಥ ಆರ್ಥಿಕ ತಜ್ಞರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ದೂರದರ್ಶಿ ಚಿಂತನೆಗೆ ಬಜೆಟ್ ಸಾಕ್ಷ್ಯವಾಗಿದೆ ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ವಾಕ್ತರ ಸಂದೀಪ್ ಎಸ್.ನೀರಲ್ಕೆ ಅಭಿಪ್ರಾಯ ತಿಳಿಸಿದ್ದಾರೆ.
ಸಾಮರಸ್ಯ ಹಾಗೂ ವೈಚಾರಿಕ ಮನೋಭಾವವನ್ನು ಉದ್ದೀಪನಗೊಳಿಸುವ ‘ನಾವು ಮನುಜರು’ ಕಾರ್ಯಕ್ರಮ, ಮೀನುಗಾರರ ಹಿತರಕ್ಷಣೆಗೆ ಸಮುದ್ರ ಆಂಬುಲೆನ್ಸ್, ಕೃಷಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಇನ್ನಿತರ ಅನೇಕ ಅಂಶಗಳಿಗೆ ಒತ್ತು ನೀಡಿ ನಾಡನ್ನು ಸಾಮರಸ್ಯದ ಹಾಗೂ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಗಳಿಂದ ವಿಮರ್ಶೆ, ಟೀಕೆ, ಟಿಪ್ಪಣಿ ಸಹಜ ಆದರೂ ಈ ಬಜೆಟ್ ಸರ್ವರ ಶ್ರೇಯಸ್ಸನ್ನು ಖಂಡಿತವಾಗಿಯೂ ಒಳಗೊಂಡಿದೆ, ಟೀಕೆಗಳು ಅಳಿಯುತ್ತದೆ-ಕೆಲಸ ಉಳಿಯುತ್ತದೆ ಎಂದು ತಿಳಿಸಿದರು.