ಬೆಳ್ತಂಗಡಿ: ತೆಂಕಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರ ಮಹೋತ್ಸವವು ಐದು ದಿನ ಕಾಲ ವಿಜೃಂಭಣೆಯಿಂದ ನಡೆದು ಫೆ.16ರಂದು ಸಂಪನ್ನಗೊಂಡಿತು.
ಉಗ್ರಾಣ ಮುಹೂರ್ತ, ತೋರಣ ಮುಹೂರ್ತ ಗಣಪತಿ ಹವನ, ನವಕ ಕಲಶ, ಮಹಾಪೂಜೆ, ನಿತ್ಯ ಬಲಿ, ದರ್ಶನ ಬಲಿ, ಶ್ರೀ ದೇವರಿಗೆ, ಹೂವಿನ ಪೂಜೆ, ಶ್ರೀ ರಂಗ ಪೂಜೆ, ಕ್ಷೇತ್ರದ ದೈವಗಳಾದ ಕೊಡಾಮಣಿತ್ತಾಯ, ಮೂಜಿಲ್ನಯ, ಕಲ್ಕುಡ ಕಲ್ಲುರ್ಟಿ ದೈವಗಳಿಗೆ, ನರ್ತನ ಸೇವೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.
ಜಾತ್ರೊತ್ಸವದ ಕೊನೆಯ ದಿನ ದಿನವಾದ ಫೆ.16ರಂದು ಕ್ಷೇತ್ರದಲ್ಲಿ ನಿತ್ಯ ಪೂಜೆ, ಉತ್ಸವ ಬಲಿ, ವಸಂತ ಕಟ್ಟೆ ಪೂಜೆ, ಕಟ್ಟೆ ಸೇವೆ ಪೂಜೆ ಜರಗಿ ಶ್ರೀ ದೇವರ ಸ್ಥಳೀಯ ಪಲ್ಗುಣಿ ನದಿಯಲ್ಲಿ ಅವಭ್ರತ ಸ್ನಾನ ನಡೆದು ಧ್ವಜಾವರೋಹಣ ಆಗಿ ಜಾತ್ರೊತ್ಸವ ಸಂಪನ್ನಗೊಂಡಿತು.
ಊರಿನ ಪರ ಊರಿನ ಭಗವದ್ ಭಕ್ತರು ಶ್ರೀ ದೇವರ ಕೃಪೆಗೆ ಪಾತ್ರರಾದರು.