Site icon Suddi Belthangady

ಬೆಳ್ತಂಗಡಿ: ಮೊಬೈಲ್ ರಿಟೇಲರ್ ಅಸೋಸಿಯೇಷನ್ ಮಹಾಸಭೆ-ನೂತನ ಸಮಿತಿ ಅಸ್ತಿತ್ವಕ್ಕೆ

ಬೆಳ್ತಂಗಡಿ: AIMRA ಹಾಗೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೊಬೈಲ್ ರಿಟೇಲರ್ ಅಸೋಸಿಯೇಷನ್ ನಿರ್ದೇಶನ ಮೇರೆಗೆ DKUMRA ಉಪಾಧ್ಯಕ್ಷ ಉಮೇಶ್ ಬೆಳ್ತಂಗಡಿ ಹಾಗೂ ಪ್ರದಾನ ಕಾರ್ಯದರ್ಶಿ ಅರಿಹಂತ್ ಜೈನ್ ರವರ ಉಪಸ್ಥಿತಿಯಲ್ಲಿ ಬೆಳ್ತಂಗಡಿ ತಾಲೂಕು ಮೊಬೈಲ್ ರಿಟೇಲರ್ ಅಸೋಸಿಯೇಷನ್ ನೂತನ ಸಮಿತಿ ರಚನೆಯಾಯಿತು.

ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಸ್ವಾತಿ ಮೊಬೈಲ್ಸ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಅರ್ಷಾದ್ ಇಮೇಜ್ ಮೊಬೈಲ್ ಬೆಳ್ತಂಗಡಿ ರವರನ್ನು ಸಂಪೂರ್ಣ ಸಹಮತದಿಂದ ಆಯ್ಕೆಮಾಡಲಾಯಿತು.

ಉಪಾಧ್ಯಕ್ಷರಾಗಿ ಸಚಿನ್ ಧರ್ಮಸ್ಥಳ, ರಾಜೇಶ್ ಸಿದ್ದಿವಿನಾಯಕ ಮಡಂತ್ಯಾರ್, ಜೊತೆ ಕಾರ್ಯದರ್ಶಿಯಾಗಿ ಸುನಿಲ್ ಮೊಬೈಲ್ ನೆಸ್ಟ್, ಕೋಶಾಧಿಕಾರಿಯಾಗಿ ಇಲ್ಯಾಸ್ ಸ್ಮಾರ್ಟ್ ಮೊಬೈಲ್, ಕ್ರೀಡಾ ಮೇಲ್ವಿಚಾರಕರಾಗಿ ಮುಜೀಬ್ ಎಮ್ ಟೆಕ್, ಹಿರಿಯ ಸಲಹೆಗಾರರಾಗಿ ರಾಘವೇಂದ್ರ ಪಾಲ್ಸ್ ಮೊಬೈಲ್ ಹಾಗೂ ಶರೀಪ್ ಹೈ ಟೆಕ್ ಮೊಬೈಲ್‌, ಬೋರ್ಡ್ ಸದಸ್ಯರಾಗಿ ಅಬುಸಾಲಿ ಬಿ ಎ ಮೊಬೈಲ್ ಹಾಗೂ ಶರೀಪ್ ಪಪ್ಪು ಮೊಬೈಲ್, ಮಾದ್ಯಮ ಪ್ರತಿನಿಧಿಯಾಗಿ ಅಜರ್ ಇವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮ ನಿರೂಪಣೆ ಹಾಗೂ ಧನ್ಯವಾದವನ್ನು ಅಜರ್ ಇಮೇಜ್ ಮೊಬೈಲ್ ಉಜಿರೆ ನೆರವೇರಿಸಿದರು.

Exit mobile version