Site icon Suddi Belthangady

ಕಲ್ಮಂಜ ಗ್ರಾ.ಪಂ ದ್ವಿತೀಯ ಸುತ್ತಿನ ಗ್ರಾಮಸಭೆ

ಬೆಳ್ತಂಗಡಿ: ಕಲ್ಮಂಜ ಗ್ರಾಮ ಪಂಚಾಯತ್ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಗ್ರಾ.ಪಂ ಅಧ್ಯಕ್ಷೆ ವಿಮಲರವರ ಅಧ್ಯಕ್ಷತೆಯಲ್ಲಿ ಫೆ.17 ರಂದು ಕಲ್ಮಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು

ನೋಡೆಲ್ ಅಧಿಕಾರಿಯಾಗಿ ಮುಖ್ಯ ಪಶು ವೈದ್ಯಾಧಿಕಾರಿ, ಸಂಚಾರಿ ಮತ್ತು ವಿಸ್ತರಣೆ, ಪಶು ಆಸ್ಷತ್ರೆ ಬೆಳ್ತಂಗಡಿ ವಿಶ್ವನಾಥ್ ಮಾರ್ಗದರ್ಶನದಲ್ಲಿ ಸಭೆ ನಡೆಯಿತು.ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತ್ ಉಪಾಧ್ಯಕ್ಷೆ ಪೂರ್ಣಿಮ, ಗ್ರಾ.ಪ್ರಂ ಸದ್ಯಸರುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.

ಶಾಲಾ ಮಕ್ಕಳು ನಾಡಗೀತೆ ಹಾಡಿ, ಗ್ರಾ.ಪಂ ಪಿ.ಡಿ.ಓ.ಇಮ್ತಿಯಾಝ್ ಕೆ. ಸ್ವಾಗತಿಸಿ, ಗ್ರಾ. ಪಂ ಕಾರ್ಯದರ್ಶಿ ಸರೋಜಿನಿ ಕೆ.ವರದಿ‌ ಮಂಡಿಸಿದರು.ಸಿಬ್ಬಂದಿ ರಮೇಶ್ ಜಮಾ-ಖರ್ಚಿನ ವಿವರ ನೀಡಿದರು.ಸಿಬ್ಬಂದಿಗಳು ಸಹಕರಿಸಿದರು‌.

Exit mobile version