Site icon Suddi Belthangady

ಸಂಕಷ್ಟದಲ್ಲಿರುವ ಹೆಂಚು ಉದ್ಯಮ ಸೂಕ್ತ ಪರಿಹಾರ ಕ್ರಮಕ್ಕಾಗಿ ಪರಿಷತ್ ನಲ್ಲಿ ಪ್ರತಾಪಸಿಂಹ ನಾಯಕ್ ಆಗ್ರಹ

ಬೆಳ್ತಂಗಡಿ: ಕೈಗಾರಿಕಾ ನೀತಿ 2020-25 ರಲ್ಲಿ ತಂತ್ರಜ್ಞಾನ ಉನ್ನತೀಕರಣಕ್ಕೆ ಶೇ 5-6% ಬಡ್ಡಿ ಸಹಾಯಧನ ನೀಡಲಾಗುತ್ತಿದೆ.ಹೊಸ ಕೈಗಾರಿಕಾ ನೀತಿಯಂತೆ ಹೊಸ ಬಂಡವಾಳ ಹೂಡಿಕೆಗೆ ಒಟ್ಟು ಸ್ಥಿರಾಸ್ತಿಯ 25% ರಿಂದ 35% ರಷ್ಟು ಗರಿಷ್ಠ ರೂ.1.05 ಕೋಟಿ ಬಂಡವಾಳ ಹೂಡಿಕೆಗೆ ಸಹಾಯಧನ ನೀಡಲಾಗುತ್ತಿದ್ದು, ಹೂಡಿಕೆಗೆ 75% ರಿಂದ 100% ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್‍ನಲ್ಲಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದ್ದಾರೆ.

ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಪ್ರತಾಪಸಿಂಹ ನಾಯಕ್ ಕರಾವಳಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಹೆಂಚು ಉದ್ಯಮ ಕುಸಿತ ಕಂಡಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹೆಂಚು ಉದ್ಯಮದ ಪುನಶ್ಚೇತನಕ್ಕೆ ಸರ್ಕಾರ ಕೈಗೊಂಡ ಕ್ರಮಗಳೇನು? ಹೆಂಚುಗಳ ಖರೀದಿ ಕ್ಷೀಣ, ಆವೆ ಮಣ್ಣಿನ ದರ ಹೆಚ್ಚಲ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಹೆಂಚು ಉದ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಖಾನೆಗಳು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಆರ್ಥಿಕವಾಗಿ ಹೆಚ್ಚಿನ ಪರಿಹಾರ ನೀಡಲು ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ಕೇಳಿದ ಪ್ರಶ್ನಿಸಿದರು.

ಕಾರ್ಖಾನೆಗಳಿಗೆ ಭೂ ಪರಿವರ್ತನೆ ಶುಲ್ಕವನ್ನು ಶೇ.75 ರಿಂದ 100% ರಷ್ಟು ಮರುಪಾವತಿ ಮಾಡಲಾಗುತ್ತಿದ್ದು, ವಿದ್ಯುತ್ ತೆರಿಗೆ ವಿನಾಯಿತಿಯನ್ನು 100% ಗರಿಷ್ಠ 4 ರಿಂದ 8 ವರ್ಷಗಳವರೆಗೆ ನೀಡಲಾಗುತ್ತಿದೆ. ಸೂಕ್ಷ್ಮ ಮತ್ತು ಕೈಗಾರಿಕೆಗಳಿಗೆ ಅವು ಬಳಸಿದ ಪ್ರತಿ ಯುನಿಟ್ ಗೆ ರೂ.1 ರಂತೆ ವರ್ಷಗಳ ಕಾಲ ವಿದ್ಯುತ್ ಸಹಾಯಧನ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

Exit mobile version