Site icon Suddi Belthangady

ಫೆ.20 ರಿಂದ 24: ಬೆಳಾಲು ಮಾಯ ಜಾತ್ರೋತ್ಸವ

ಬೆಳಾಲು: ಮಾಯ ಶ್ರೀ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ.20 ರಿಂದ 24ರವರೆಗೆ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಫೆ.20ರಂದು ಬೆಳಗ್ಗೆ ಗಣಹೋಮ, ಮಾಯ ಗುತ್ತಿನ ಮನೆಯಲ್ಲಿ ಶಾರಿ ಹಾಕಿ ಗೊನೆ ಕಡಿಯುವುದು, ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ಬಾಲೆ ಮೊಟ್ಟಿಕಲ್ಲು ಪಾದಪೂಜೆ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ತಂತ್ರಿವರ್ಯರ ಸ್ವಾಗತ, ದೇವಸ್ಥಾನದಲ್ಲಿ ತೋರಣ ಇಡುವುದು, ಮಾಯ ಭಜನಾ ತಂಡದಿಂದ ಭಜನೆ, ಅಂಗನವಾಡಿ ಮಕ್ಕಳಿಂದ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ, ರಾತ್ರಿ ಧ್ವಜಾರೋಹಣ, ಉಗ್ರಾಣ ತುಂಬುವುದು, ಮಹಾಪೂಜೆ, ಬಲಿ ಉತ್ಸವ, ಬಳಿಕ ಶಶಿಧರ ಒಡಿಪ್ರೊಟ್ಟು ಬಳಗದಿಂದ ಭಕ್ತಿ ರಸಮಂಜರಿ, ಮಾಯ ಫ್ರೆಂಡ್ಸ್ ಇವರಿಂದ ತುಳು ಪ್ರಹಸನ, ರಾಜೇಶ್ ಆಚಾರ್ಯ ಸವಣಾಲು ರಚನೆಯ ತುಳು ನಾಟಕ ಪಂಡಿನವು ನೆನಪಿಪ್ಪಡ್.

ಫೆ.21ರಂದು ಬೆಳಗ್ಗೆ ಗಣಹೋಮ, ಕಲಶ ಪೂಜೆ, ಕೊಲ್ಪಾಡಿ ಭಜನಾ ಮಂಡಳಿಯಿಂದ ಭಜನೆ, ಮಹಾಪೂಜೆ ಅನ್ನಸಂತರ್ಪಣೆ, ಸಂಜೆ ಮಾಯ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಸಂಜೆ ದುರ್ಗಾ ಪೂಜೆ, ರಾತ್ರಿ ಮಹಾಪೂಜೆ, ಬಲಿ ಉತ್ಸವ, ಬೆಳಾಲು, ಬೇರಿಕೆ ಸುರುಳಿ ಅಂಗನವಾಡಿ ಮಕ್ಕಳಿಂದ ಮತ್ತು ಬಾಲನಟಿ ಅನನ್ಯಾ ಪೆಲತ್ತಡಿ ಇವರಿಂದ ನೃತ್ಯ ವೈವಿಧ್ಯ, ರಾತ್ರಿ ತಲಕಳ ಮೇಳದ ಯಕ್ಷಗಾನ ಬಯಲಾಟ ಕೃಷ್ಣ ಲೀಲೆ, ಜ್ಞಾನಶ್ರೀ ಜ್ಞಾನವಿಕಾಸ ಸದಸ್ಯರಿಂದ ತುಳು ನಾಟಕ ನಿಗಂಟ್ ಆತ್ಂಡ್.

ಫೆ.22ರಂದು ಬೆಳಗ್ಗೆ ಗಣಹೋಮ, ಸೂಡರ ಬಲಿ ಉತ್ಸವ, ಅನಂತೋಡಿ ಭಜನಾ ಮಂಡಳಿಯಿಂದ ಭಜನೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆ, ನಿಂತಿಕಲ್ಲು ಮಕ್ಕಳಿಂದ ನೃತ್ಯ ವೈವಿಧ್ಯ. ಕೊಲ್ಪಾಡಿ ಮಹಿಳಾ ಬಳಗದಿಂದ ಸುಗ್ಗಿ ಕುಣಿತ. ರಾತ್ರಿ ಚಂದ್ರಮಂಡಲ ಉತ್ಸವ, ವಸಂತ ಕಟ್ಟೆಪೂಜೆ, ಬಳಿಕ ವಿಷ್ಣು ಕಲಾವಿದೆರ್ ಮದ್ದಡ್ಕ ಇವರಿಂದ ನಾಟಕ ಬ್ರಹ್ಮದಂಡ.

ಫೆ.23ರಂದು ಬೆಳಗ್ಗೆ ಗಣಹೋಮ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪಲ್ಲಪೂಜೆ ಅನ್ನ ಸಂತರ್ಪಣೆ ನಂತರ ಒಡಿಯೂರು ರವಿರಾಜ್ ಬಳಗದಿಂದ ಗಾನಸುರಭಿ, ಸಂಜೆ ಜನಾರ್ದನ ಪೆಲತ್ತಡಿ ಬಳಗದಿಂದ ಭಕ್ತಿಗಾನ ಸುಧೆ, ಮಾಯ ಗುತ್ತು ಮನೆಯಿಂದ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಭಂಡಾರ ಆಗಮನ, ರಾತ್ರಿ ರಥೋತ್ಸವ, ಭೂತಬಲಿ ಶಯನೋತ್ಸವ.

ಫೆ.24ರಂದು ಬೆಳಗ್ಗೆ ಗಣಹೋಮ, ಕವಾಟೋದ್ಘಾಟನೆ, ಮಹಾಪೂಜೆ, ಸಂಜೆ ಅವಭ್ರತ, ಧ್ವಜಾವರೋಹಣ, ನಿತ್ಯಪೂಜೆ, ರಂಗಪೂಜೆ, ರಾತ್ರಿ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ನೇಮಬಲಿ, ಗುತ್ತಿನ ಮನೆಗೆ ಭಂಡಾರ ನಿರ್ಗಮನ.

ಫೆ.25ರಂದು ಬೆಳಗ್ಗೆ ಗಣಹೋಮ, ದೇವಸ್ಥಾನದ ನಾಗಬನದಲ್ಲಿ ನಾಗ ತಂಬಿಲ ಸೇವೆ, ಸಂಪ್ರೋಕ್ಷಣೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಪದ್ಮ ಗೌಡ ತಿಳಿಸಿದ್ದಾರೆ.

ಮಹಾಪ್ರಸಾದ ಬಿಡುಗಡೆ:
ಫೆ.20ರಂದು ಸಾಯಂಕಾಲ ಶ್ರೀ ಧ.ಮಂ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿಯವರ ಪ್ರಧಾನ ಸಂಪಾದಕತ್ವದಲ್ಲಿ ರಚಿತವಾದ ದೇವಸ್ಥಾನದ ಚರಿತ್ರೆ ಮತ್ತು ವಾರ್ಷಿಕ ಆಚರಣೆಗಳ, ವಿಶೇಷ ಹಬ್ಬ ಹರಿದಿನಗಳ ನಡಾವಳಿಗಳ ಮಾಹಿತಿಯ ಕಿರುಪುಸ್ತಕ ಮಹಾಪ್ರಸಾದ ಬಿಡುಗಡೆಗೊಳ್ಳಲಿದೆ.

Exit mobile version