Site icon Suddi Belthangady

ಫೆ.13: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವಾರ್ಷಿಕ ಮೂಡಪ್ಪ ಸೇವೆ

ಉಜಿರೆ: ಬಯಲು ಆಲಯ ಖ್ಯಾತಿಯ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಶ್ರೀ ದೇವರ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ವರ ನೇತೃತ್ವದಲ್ಲಿ ಫೆ.13ರಂದು ಮಂಗಳವಾರ ಬೆಳಿಗ್ಗೆ 8 ರಿಂದ  108  ತೆಂಗಿನಕಾಯಿ ಗಣಹೋಮ ಹಾಗೂ ರಾತ್ರಿ 9 ಕ್ಕೆ ಮೂಡಪ್ಪ  ಸೇವೆ ನಡೆಯಲಿದೆ.

ಬೆಳಿಗ್ಗೆ 8 ರಿಂದ ಸಂಜೆ 5ರ ವರೆಗೆ ವಿವಿಧ ಭಜನಾ ತಂಡಗಳಿಂದ ಉಪ್ಪಿನಂಗಡಿಯ ವಾಮನ ನಾಯಕ್ ನೇತೃತ್ವದಲ್ಲಿ ಭಜನಾ ಸೇವೆ, ಸಂಜೆ 5.30ರಿಂದ ಶ್ರೀ ಕ್ಷೇತ್ರ ಸೌತಡ್ಕದ ಪುಟಾಣಿ ವಿದ್ಯಾರ್ಥಿಗಳಿಂದ “ಚಿಣ್ಣರ ಚಿಲಿಪಿಲಿ”, ಸಂಜೆ 6.30ರಿಂದ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕೊಕ್ಕಡ ಶಾಖೆಯ ವಿದ್ಯಾರ್ಥಿಗಳಿಂದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿ ಕಲಾ ಮತ್ತು ವಿದ್ವಾನ್ ಗಿರೀಶ್ ಕುಮಾರ್ ನಿರ್ದೇಶನದಲ್ಲಿ  “ನೃತ್ಯಾಂ ಜಲಿ “, ರಾತ್ರಿ 8ರಿಂದ ಝೀ ಕನ್ನಡ ವಾಹಿನಿಯ ದ.ಕ.ಜಿಲ್ಲೆಯ  ಬಿ.ಸಿ ರೋಡಿನ  ನೃತ್ಯ ತಂಡದ  ತುಳು ಚಲನಚಿತ್ರ ನಿರ್ದೇಶಕ  ವಿನೋದ್ ರಾಜ್ ನೇತೃತ್ವದ “ಎಕ್ಸ್ಟೀಮ್ ಡಾನ್ಸ್ ಕ್ರೂ” ತಂಡದಿಂದ “ಡಾನ್ಸ್ ಕರ್ನಾಟಕ ಡಾನ್ಸ್ ” ನೃತ್ಯ -ಗಾನ -ಸಂಭ್ರಮ ನಡೆಯಲಿದೆ.

ಭಕ್ತಾಭಿಮಾನಿಗಳು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಮಹಾಗಣಪತಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Exit mobile version