ಬೆಳ್ತಂಗಡಿ: ಸೀರೋ ಮಲಬಾರ್, ಮಲಂಕರ ಸಭೆ ಸೇರಿದಂತೆ ವಿವಿದ ಧರ್ಮ ಸಭೆಯ ಚರ್ಚ್ ಗಳಲ್ಲಿ ಲೋಕ ರಕ್ಷಕ, ಮಹಾನ್ ಮಾನವತಾವಾದಿ, ಸಹನೆ, ತ್ಯಾಗ ಮತ್ತು ಪ್ರೀತಿಯ ಮೂಲಕ ಲೋಕವನ್ನು ಗೆದ್ದ ಯೇಸು ಕ್ರಿಸ್ತರ ಯಾತನೆಯನ್ನು ನೆನಪಿಸುವ ಪಾಸ್ಕ ಕಾಲಕ್ಕೆ ಕ್ರೈಸ್ತರು ವಿವಿಧ ಚರ್ಚ್ ಗಳಿಗೆ ಇಂದು ಮುಂಜಾನೆ ತೆರಳಿ ಪೂಜಾರ್ಪಣೆಯಲ್ಲಿ ಬಾಗವಹಿಸಿ ಹಣೆಗೆ ಆಶೀರ್ವದಿಸಿದ ವಿಭೂತಿಯನ್ನು ಧರ್ಮ ಗುರುಗಳಿಂದ ಹಚ್ಚಿ ವ್ರತಾನುಷ್ಟಾನಕ್ಕೆ ಪ್ರವೇಶ ಪಡೆದರು.
ಇಂದಿನಿಂದ ಸಾಮಾನ್ಯವಾಗಿ ಕ್ರೈಸ್ತರು ಮಾಂಸ ಆಹಾರವನ್ನು ತ್ಯಜಿಸಿ ಸಂಪೂರ್ಣ ಶಾಖಾಹಾರಿಗಳಾಗಿ ಬದಲಾಗುತ್ತಾರೆ.ಪ್ರತಿ ದಿನ ಪೂಜೆಯಲ್ಲಿ ಬಾಗವಹಿಸಿ ಶಿಲುಬೆಯ ಹಾದಿಯ ಪ್ರಾರ್ಥನೆ ಯನ್ನು, ಮನೆಗಳಲ್ಲಿ ಚರ್ಚ್ ಗಳಲ್ಲಿ ಮಾಡುವುದು ಈ ಸಂದರ್ಭದ ವಿಶೇಷ, ಮಾಡಿದ ತಪ್ಪುಗಳಿಗೆ ಪರಿಹಾರ ಮತ್ತು ಪಾಪ ವಿಮುಕ್ತಿ ಪಡೆಯುವುದು ಈ ವ್ರತಾಚರಣೆಯ ದಿನಗಳ ವಿಶೇಷತೆಯಾಗಿದೆ.
ಇಂದಿನಿಂದ ಈಸ್ಟರ್ ವರೆಗಿನ ಐವತ್ತು ದಿನಗಳ ವರೆಗೆ ಈ ವ್ರತಚಾರಣೆ ನಡೆಯಲಿದೆ.ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಧರ್ಮ ಗುರುಗಳಾದ ವಂದನಿಯ ಫಾ.ಶಾಜಿ ಮಾತ್ಯು, ಫಾ.ಆಶೀಲ್ ನೇತೃತ್ವ ವಹಿಸಿದರು.