Site icon Suddi Belthangady

ಮುಂಡಾಜೆ ಸೀಟ್ ಕಾಡಿನ ಬಳಿ ಕಾರು ಮರಕ್ಕೆ ಡಿಕ್ಕಿ, ಓರ್ವ ಸಾವು

ಮುಂಡಾಜೆ: ರಾಣೆ ಬೆಂಗಳೂರು ಕಡೆಯಿಂದ ಉಜಿರೆ ಕಡೆಗೆ ಪಯಣಿಸುತ್ತಿದ್ದ ಇಟಿಯೋಸ್ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಘಟನೆ ಮುಂಡಾಜೆ ಸೀಟ್ ಕಾಡಿನ ಬಳಿ ನಡೆದಿದೆ.

ಈ ಅಪಘಾತದಲ್ಲಿ ಓರ್ವ ಸಾವನ್ನಪ್ಪಿರುವ ಮಾಹಿತಿಯಿದ್ದು, ಸಾವನ್ನಪ್ಪಿದವರನ್ನು ಶ್ರೀಧರ್ ಎಂದು ಗುರುತಿಸಲಾಗಿದೆ.

ಗಾಯಗೊಂಡಿರುವ ಉಳಿದ ಮೂವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

Exit mobile version