Site icon Suddi Belthangady

ಸೌತಡ್ಕದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಶುಭಾರಂಭ

ಕೊಕ್ಕಡ :ಪಡ್ಡಾಯಿಬೆಟ್ಟು ಕೃಷ್ಣಪ್ಪ ಗೌಡ ಮಾಲಕತ್ವದ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಸೌತಡ್ಕದಲ್ಲಿ ಫೆ.11ರಂದು ಶುಭಾರಂಭಗೊಂಡಿತು.

ಮಳಿಗೆಯ ಉದ್ಘಾಟನೆಯನ್ನು ಅರಸಿನಮಕ್ಕಿ ಪಂಚಾಯತ್ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ.ಎಸ್ ನೆರವೇರಿಸಿ ಶುಭಕೋರಿದರು. ಕಾರ್ಯಕ್ರಮದ ಸ್ವಾಗತವನ್ನು ಉದಯಶಂಕರ್, ಧನ್ಯವಾದವನ್ನು ಮಾಲಕರಾದ ಕೃಷ್ಣಪ್ಪ ಗೌಡ ನೆರವೇರಿಸಿದರು.

ಈ ಸಂಧರ್ಭದಲ್ಲಿ ಅರಸಿನಮಕ್ಕಿ ಶಕ್ತಿ ಕೇಂದ್ರ ಪ್ರಮುಖ್ ಗಣೇಶ್.ಕೆ,ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಮುರಳಿಧರ್ ಶೆಟ್ಟಿಗಾರ್, ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮಚಂದ್ರ, ಸುಂದರ ರಾಣ್ಯ ಉಪಸ್ಥಿದರಿದ್ದರು.

Exit mobile version