Site icon Suddi Belthangady

ಪುಂಜಾಲಕಟ್ಟೆ ಸ.ಪ್ರ.ದ.ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ 2023-24ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕುಕ್ಕೇಡಿ ಬುಳೆಕ್ಕಾರ ಇಲ್ಲಿ ಫೆ.09ರಂದು ನಡೆಯಿತು.

“ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ” ಎಂಬ ಧ್ಯೇಯ ವಾಕ್ಯದೊಂದಿಗೆ ಈ ಶಿಬಿರವನ್ನು ಗ್ರಾ.ಪಂ.ಕುಕ್ಕೇಡಿ ಇದರ ಅಧ್ಯಕ್ಷೆ ಅನಿತಾ ಕೆ ಇವರು ಉದ್ಘಾಟಿಸಿದರು.

ಸ್ವಯಸೇವಕರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಉತ್ತಮ ಅಭಿಪ್ರಾಯವನ್ನು ಜನರಲ್ಲಿ ಬಿಂಬಿಸುವುದು, ಸಮುದಾಯದ ಅವಶ್ಯಕತೆಗಳು, ಸಮಸ್ಯೆಗಳು ಮತ್ತು ಮತ್ತು ಸಂಪನ್ಮೂಲಗಳನ್ನು ಗುರುತಿಸುವುದಾಗಿದೆ.ಆತ್ಮ ವಿಶ್ವಾಸ ಬೆಳೆಸಿಕೊಂಡು ಕೆಲಸ ಕಾರ್ಯಗಳನ್ನು ಸ್ವತಃ ನಿರ್ವಹಿಸುವುದು ಹಾಗು ಶಿಸ್ತು, ಸಮಯ ಪಾಲನೆ ಸಹಬಾಳ್ವೆ ಇತ್ಯಾದಿಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಮಾಧವ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಯಂಸೇವಕರಿಗೆ ಶಿಬಿರದ ಮಹತ್ವವನ್ನು ತಿಳಿಸಿ, ಶಿಬಿರದ ಅವಧಿಯಲ್ಲಿ ಶಿಬಿರಾರ್ಥಿಗಳು ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸುವಲ್ಲಿ ಶಿಬಿರಾರ್ಥಿಗಳ ಪಾತ್ರ ವಿವರಿಸಿದರು ಶಿಬಿರಾಧಿಕಾರಿಗಳಾದ ಪ್ರೊ.ಚಿತ್ರಾ ಪಡಿಯಾರ್ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಈ ಶಿಬಿರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಕ್ಕೇಡಿ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲ ಶೆಟ್ಟಿ, ಶಾಲೆಯ ಮುಖ್ಯ ಶಿಕ್ಷಕರಾದ ಸತೀಶ, ಕಿಶೋರ್ ಕುಮಾರ್ ಜೈನ್ ಬುಳೆಕ್ಕಾರ ಬೀಡು, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೃಷ್ಣಪ್ಪ ಉಜ್ಜಾಲ್, ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶಾಮರಾವ್ ಯು ಜಿ, ಸುಬ್ಬಣ್ಣ ಶೆಟ್ಟಿ ಕೃಷಿಕರು ಇವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.ಶಿಬಿರಾಧಿಕಾರಿಗಳಾದ ಪ್ರೊ.ಸಂತೋಷ್ ಪ್ರಭು, ಪ್ರೊ.ಚಿತ್ರಾ ಪಡಿಯಾರ್, ಪದಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿಗಳನ್ನು ರೆಡ್ ರಿಬ್ಬನ್ ಕ್ಲಬ್ ನ ಪದಾಧಿಕಾರಿಯಾದ ರೂಪ ಸ್ವಾಗತಿಸಿದರು ಹಾಗು ರೇಖಾ ಧನ್ಯವಾದವಿತ್ತರು. ದೀನಕೃಪಾ ನಿರೂಪಿಸಿದರು.

Exit mobile version