Site icon Suddi Belthangady

ಉಜಿರೆಯಲ್ಲಿ ತಾಲೂಕು ಶಿಕ್ಷಕರಿಗೆ ಗುರುಸ್ಪಂದನ ಕಾರ್ಯಕ್ರಮ

ಬೆಳ್ತಂಗಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ, ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದೊಂದಿಗೆ,ಶಿಕ್ಷಕರ ಹಲವು ದಿನಗಳ ಬೇಡಿಕೆಯಾದ ಗುರುಸ್ಪಂದನ ಕಾರ್ಯಕ್ರಮವನ್ನು ಫೆ.10ರಂದು ಉಜಿರೆ ಶ್ರೀ ಧ.ಮ.ಪ್ರೌಢ ಶಾಲೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸುರೇಶ್ ರವರು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಮಾಚಾರ್,ಸಂಘದ ಇದುವರೆಗಿನ ಸಾಧನೆಗಳ ಬಗ್ಗೆ ಮಾತನಾಡಿ ,ಎಲ್ಲರನ್ನೂ ಸಭೆಗೆ ಸ್ವಾಗತಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಐರಿನ್ ಡೇಸ,ತಾಲೂಕು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಡ್ವರ್ಡ್ ಡಿಸೋಜ, ಜಿ.ಪಿ.ಟಿ.ಸಂಘದ ತಾಲೂಕು ಅಧ್ಯಕ್ಷ ಯೋಗೀಶ್ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಅಧೀಕ್ಷಕರಾದ ಲಿಡ್ವಿನ್ ಫೆರ್ನಾಂಡೀಸ್ ಕಾರ್ಯಕ್ರಮದ ಬಗ್ಗೆ ಸ್ಥೂಲ ಪರಿಚಯ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಕಿಶೋರ್ ಕುಮಾರ್ ವಹಿಸಿದ್ದರು.

ಸಂಘದ ಸಹ ಕಾರ್ಯದರ್ಶಿ ಜ್ಯೋತಿ ಎಂ.ಎಸ್.ಕಾರ್ಯಕ್ರಮ ನಿರ್ವಹಿಸಿದರು.ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿಷಯ ನಿರ್ವಾಹಕರಾದ ಆದರ್ಶ್,ಇಮ್ರಾನ್, ಸುರೇಶ್, ವಜ್ರಕುಮಾರ್,ಸಂತೋಷ್ ,ರಾಜೇಂದ್ರ ಮತ್ತು ಶಾರದಾ ಭಟ್ ಸಹಕಾರದಲ್ಲಿ ತಮ್ಮ ವ್ಯಾಪ್ತಿಯ ಶಿಕ್ಷಕರ ಸೇವಾಪುಸ್ತಕಗಳ ಪರಿಶೀಲಿಸಲು ಅವಕಾಶ ನೀಡಲಾಯಿತು.ಸಿ.ಆರ್.ಪಿ.ಗಳಾದ ಪ್ರತಿಮ,ಪ್ರಶಾಂತ್ ಮತ್ತು ವಿಲ್ಫ್ರೆಢ್ ಪಿಂಟೊ ಸಹಕರಿಸಿದರು.

Exit mobile version