Site icon Suddi Belthangady

ಹತ್ಯಡ್ಕ: ಕಾಪು-ಉಪರಡ್ಕ ದೈವಗಳ ನೇಮೋತ್ಸವಕ್ಕೆ ಚಾಲನೆ

ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ಕಾಪು-ಉಪರಡ್ಕ ದೈವಗಳ ವಾರ್ಷಿಕ ಜಾತ್ರೆಯು ಫೆ.9ರಿಂದ 11ರವರೆಗೆ ಕಾಪು-ಉಪರಡ್ಕ ದೈವಸ್ಥಾನದಲ್ಲಿ ನಡೆಯಲಿರುವುದು.

ಫೆ.8ರಂದು ಬೆಳಿಗ್ಗೆ ಕಾಪು ಸ್ಥಾನದಲ್ಲಿ ಗಣಹೋಮ, ಫೆ.9ರಂದು ಬೆಳಿಗ್ಗೆ ತೋರಣ, ಭಂಡಾರ ಹಿಡಿಯುವುದು ಮತ್ತು ಬ್ರಹ್ಮರು, ಕುಮಾರ, ಬೊಳ್ಯ ಪಾಲೇಶರಾಯ, ಪಾಳೆದುಳ್ಳಾಲ್ತಿ, ಮುಗೇರ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು.

ಫೆ.10ರಂದು ತೋರಣ ಮುಹೂರ್ತ, ಮಧ್ಯಾಹ್ನ ಮೆದಿನದಿಂದ ರುದ್ರ ಚಾಮುಂಡಿ ದೈವದ ಭಂಡಾರ ತರುವುದು, ಸಂಜೆ ಹೊಸ್ತೋಟದಿಂದ ಕೊಡಮಣಿತ್ತಾಯ ದೈವದ ಭಂಡಾರ ತರುವುದು, ಗುತ್ತುವಿನಿಂದ ಶಿರಾಡಿ ದೈವದ ಭಂಡಾರ ತರುವುದು. ರಾತ್ರಿ ಬ್ರಹ್ಮರು, ರುದ್ರಚಾಮುಂಡಿ, ಕಲ್ಕುಡ, ಪಂಜುರ್ಲಿ ಇತ್ಯಾದಿ ದೈವಗಳ ನೇಮೋತ್ಸವ ಜರುಗಲಿದೆ.ಫೆ.11ರಂದು ಕೊಡಮಣಿತ್ತಾಯ, ಶಿರಾಡಿ, ಬಚ್ಚನಾಯ್ಕ ಗುಳಿಗ ಇತ್ಯಾದಿ ದೈವಗಳ ನೇಮೋತ್ಸವ ನಡೆಯಲಿರುವುದು.ಫೆ.12ರಂದು ಬೆಳಿಗ್ಗೆ ಶುದ್ಧ ಕಲಶ, ತಂಬಿಲ ನಡೆಯಲಿದೆ.

Exit mobile version