ಬಾರ್ಯ: ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ 4ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ಪರಿವಾರ ದೈವಗಳ ನೇಮೋತ್ಸವ ಫೆ.6ರಿಂದ 9ರವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿ ಫೆ.8ರಂದು ದೇವತಾ ಪ್ರಾರ್ಥನೆ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಸಾಯಂಕಾಲ ಬಾರ್ಯ ಪಾಂಡುರಂಗ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಕಾರ್ತಿಕ ಪೂಜೆ ಹಾಗೂ ಭದ್ರಕಾಳಿ ಅಮ್ಮನವರ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಅಧ್ಯಕ್ಷ ಬಿ.ವಿ. ಸುಂದರ ನೂರಿತ್ತಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಕೊಪ್ಪದಬೆಟ್ಟು, ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಪಂರ್ದಗುತ್ತು, ಕಾರ್ಯದರ್ಶಿ ಪ್ರಶಾಂತ್ ಪೈ, ಉತ್ಸವ ಸಮಿತಿ ಸಂಚಾಲಕ ಚೇತನ್ ಅದಮ್ಮ, ಅರ್ಚಕ ಗುರುಪ್ರಾದ ನೂರಿತ್ತಾಯ, ದಯಾನಂದ ಆಲಡ್ಕ, ಸುಂದರ ಕಲಾಯ, ಜಯಂತ್ ಸುಣ್ಣಾಜೆ, ಬಾಲಕೃಷ್ಣ ಶೆಟ್ಟಿ, ಪ್ರಕಾಶ್ ಗೌಡ, ನಾರಾಯಣ ಗೌಡ, ದೊಂಪದ ಬಲಿ ಸೇವಾ ಸಮಿತಿ ಅಧ್ಯಕ್ಷ ಅರುಣ್ ಬಜೆಕ್ಕಳ, ಬಳ್ಳಿದಡ್ಡ ಡೊಂಬ್ಬಯ್ಯ ಗೌಡ, ಬೈಲೂವರು ಸಮಿತಿ ಅಧ್ಯಕ್ಷ ಉಮೇಶ್ ಕುಲಾಲ್, ಕೆ.ಕೃಷ್ಣ ಮಾಣಿಯಾನಿ, ನವೋದಯ ಪ್ರೇರಕರು ಲೋಕೇಶ್ ಗೌಡ, ಬಿ.ಬೊಬ್ಬಣ್ಣ ಗೌಡ , ವಿಜಯಲಕ್ಷ್ಮಿ ರೈ, ಶ್ರುತಿ ಪ್ರದೀಪ್, ವಿದ್ಯಾ ಪ್ರಭಾಕರ್, ವಸಂತ್ ಶೆಟ್ಟಿ ಹಾಗೂ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದು.
ಫೆ.9ರಂದು ದೇವರಿಗೆ ಕಾರ್ತಿಕ ಪೂಜೆ, ಅನ್ನಸಂತರ್ಪಣೆ, ನಮ್ಮ ಕಲಾವಿದೆರ್ ಬೆದ್ರ ಇವರಿಂದ ತುಳುನಾಟಕ ಕುಸಾಲ್ದ ಗೊಬ್ಬ ಪ್ರದರ್ಶನಗೊಳ್ಳಲಿದೆ.ಗ್ರಾಮ ದೈವ ಪಂಜುರ್ಲಿ ಮತ್ತು ಕಲ್ಕುಡ ದೈವಗಳ ನೇಮೋತ್ಸವ ನಡೆಯಲಿದೆ.