ಉಜಿರೆ: ಉಜಿರೆ ಗ್ರಾಮದ ಶ್ರೀ ಕ್ಷೇತ್ರ ಕಾಶಿಬೆಟ್ಟು, ಭಗವಾನ್ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ಮಡಂತ್ಯಾರು ಶ್ರೀ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಫೆ. 10ರಂದು 24ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ನವಗ್ರಹ ಶಾಂತಿಯುಕ್ತ ಶನೈಶ್ಚರ ಶಾಂತಿ ಹೋಮವು ಜರಗಲಿದೆ.
ಫೆ.9 ರಂದು ರಾತ್ರಿ ದೇವತಾ ಪ್ರಾರ್ಥನೆ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ಫೆ.10ರಂದು ಬೆಳಿಗ್ಗೆ ಗಂಟೆ 8.30ಕ್ಕೆ ನವಕ ಪ್ರಧಾನ ಕಲಾಹೋಮ, 10.00ಕ್ಕೆ ನವಗ್ರ ಶಾಂತಿ ಹೋಮ, ಶನೈಶ್ಚರ ಶಾಂತಿ ಹೋಮ ಪ್ರಾರಂಭ, 12.30ಕ್ಕೆ ಪೂಜೆ, ಪೂರ್ಣಾಹುತಿ, ಮಧ್ಯಾಹ್ನ ಗಂಟೆ 1.00ಕ್ಕೆ ಶನೈಶ್ಚರ ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ನವಗ್ರಹ ಶಾಂತಿ ಮತ್ತು ಶನೈಶ್ಚರ ಶಾಂತಿ ಹೋಮ ಮಾಡಿಸುವವರು ದೇವಸ್ಥಾನಕ್ಕೆ ಬಂದು ರೂ. 800/- ಕೊಟ್ಟು ರಶೀದಿ ಪಡೆದುಕೊಂಡು ನಿಮ್ಮ ಹೆಸರಿನಲ್ಲಿ ಸಂಕಲ್ಪ ಮಾಡಲು ವಿವರ ಕೊಡಬೇಕು.ಪ್ರತೀ ಶನಿವಾರ ಶ್ರೀ ಕ್ಷೇತ್ರದಲ್ಲಿ ವಿಶೇಷ ಶನಿ ಪೂಜೆ ಇರುತ್ತದೆ.ರಾಶಿಯವರು ಹೋಮ ಮಾಡಿಸಿದರೆ ತಮ್ಮ ಹಸ್ತ ದಿಂದಲೇ ಬಾಳೆ ಹಣ್ಣು ತುಪ್ಪ ಹೋಮಕ್ಕೆ ಹಾಕಲಾಗುವುದು.
ಕ್ಷೇತ್ರದಲ್ಲಿ ನವಗ್ರಹ ಶಾಂತಿ, ರಾಹು ಬೃಹಸ್ಪತಿ ಸಂಧಿ ಶಾಂತಿಗಳು, ಶುಕ್ರ ಆದಿತ್ಯ ಸಂಧಿ ಶಾಂತಿ, ಕುಜ ರಾಹು ಸಂಧಿ ಶಾಂತಿ, ಕುಂಭ ವಿವಾಹ, ಕದಳಿ ವಿವಾಹ, ಮಹಾ ಮೃತ್ಯುಮಜಯ ಶಾಂತಿಗಳು ನಡೆಯುತ್ತದೆ ಎಂದು ಧರ್ಮದರ್ಶಿ ಜಾತಕ ಮತ್ತು ವಾಸ್ತು ಶಸ್ತ್ರಾಜ್ನ್ಯ ಜನಾರ್ದನ ಆಚಾರ್ಯ ತಿಳಿಸಿದ್ದಾರೆ.