ಅಂಡಿಂಜೆ: ವಿಕಲ ಚೇತನರ ಸಮನ್ವಯ ಗ್ರಾಮ ಸಭೆಯು ಫೆ.7ರಂದು ಅಂಡಿಂಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ವೇತಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ತಾಲೂಕು ವಿಕಲಚೇತನ ಅಧಿಕಾರಿ ಜಾನ್ ಬ್ರಾಪಿಕ್ಸ್ ಡಿ.ಸೋಜ ಇವರು ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಸಮುದಾಯ ಆರೋಗ್ಯ ಅಧಿಕಾರಿ ಸ್ವಾತಿ ಇವರು ವಿಕಲ ಚೇತನರಿಗೆ ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯರುಗಳಾದ ಹರೀಶ ಹೆಗ್ಡೆ, ವಂದನಕುಮಾರಿ, ಶೋಭಾ ನಾಯ್ಕ, ಪಂಚಾಯತ್ ಕಾರ್ಯದರ್ಶಿ ಚಂಪಾ, ಗ್ರಾ.ಪಂ ಗ್ರಾಮೀಣ ಪುನರ್ವಸತಿ ಕೇಂದ್ರ ಸಂಯೋಜಕಿ ಸುನಿತಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿಕಲಚೇತನ ಫಲಾನುಭವಿಗಳು ಭಾಗವಹಿಸಿದ್ದರು.
ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.ಗ್ರಾಮ ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕ ಸಹಾಯಕರದ ಮಮತಾ ಇವರು ಸ್ವಾಗತಿಸಿ, ವಂದಿಸಿದರು.