Site icon Suddi Belthangady

ಫೆ.12: ಉಜಿರೆಯಲ್ಲಿ ಕಟೀಲು ಮೇಳದ ಶ್ರೀ ದೇವಿಮಹಾತ್ಮೆ ಯಕ್ಷಗಾನ  ಪ್ರದರ್ಶನ

ಉಜಿರೆ: ಶ್ರೀ ದುರ್ಗಾ ನಿಲಯದ ಸುನಂದಾ ಮತ್ತು ಯು.ಸದಾಶಿವ ಶೆಟ್ಟಿ, ಮಕ್ಕಳು, ಅಳಿಯಂದಿರು ಹಾಗು ಸೊಸೆಯಂದಿರ ಸೇವೆಯಾಗಿ ಪ್ರತಿವರ್ಷದಂತೆ ಫೆ.12ರಂದು ಬೆಳಿಗ್ಗೆ 9.30ರಿಂದ ಉಜಿರೆ ಶ್ರೀ ದುರ್ಗಾ ನಿಲಯದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಹಾಗು ಶನೀಶ್ವರ ಪೂಜೆ  ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ  ನಡೆಯಲಿದೆ.

ಸಂಜೆ 4ರಿಂದ ಬೆಳ್ತಂಗಡಿ ಹಳೇಕೋಟೆ ಭಗವಾನ್ ಶಿರಡಿ ಸಾಯಿ ಸತ್ಯಸಾಯಿ ಸೇವಾ ಕ್ಷೇತ್ರದವರಿಂದ ಭಜನಾ ಕಾರ್ಯಕ್ರಮ ಹಾಗು ಸಂಜೆ 6ರಿಂದ ರಾತ್ರಿ 12ರ ವರೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಶ್ರೀ ದೇವಿ ಮಹಾತ್ಮೆ” ಪ್ರಸಂಗದ ಯಕ್ಷಗಾನ ಸೇವಾ ಬಯಲಾಟ ಪ್ರದರ್ಶಿಸಲ್ಪಡಲಿದೆ.

ಕಟೀಲು ಶ್ರೀ ಮಾತೆಯ ಭಕ್ತಾದಿಗಳು ಆಗಮಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಪೌರಾಣಿಕ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸುವಂತೆ ಸೇವಾಕರ್ತರಾದ ಯು.ಸದಾಶಿವ ಶೆಟ್ಟಿ ಮತ್ತು ಮಕ್ಕಳು ವಿನಂತಿಸಿಕೊಂಡಿದ್ದಾರೆ. 

Exit mobile version