ಬೆಳ್ತಂಗಡಿ: ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಮಾ.10ರಂದು ಮುಲ್ಕಿಯಲ್ಲಿ ನಡೆಯುವ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ “ಬೆಳ್ಳಿ ಹಬ್ಬ ಸಂಭ್ರಮ” ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯನ್ನು ಫೆ.5ರಂದು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಸಭಾಂಗಣದಲ್ಲಿ ಜರಗಿತು.
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಡಾ. ರಾಜಶೇಖರ್ ಕೋಟ್ಯಾನ್ ಕಾರ್ಯಕ್ರಮದ ಕುರಿತು ವಿವರ ನೀಡಿದರು. ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿಕಟ ಪೂರ್ವ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಮಾಜಿ ಅಧ್ಯಕ್ಷ ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ನಿವೃತ್ತ ಎಸ್ ಪಿ ಪೀತಾ0ಬರ ಹೇರಾಜೆ ಮಹಾ ಮಂಡಲದ ಬೆಳ್ಳಿ ಹಬ್ಬದ ಮತ್ತು ಗೆಜ್ಜೆಗಿರಿ ಕ್ಷೇತ್ರದ ಜಾತ್ರೆ ಮತ್ತು ಕ್ಷೇತ್ರದ ಕುರಿತು ಮಾತನಾಡಿದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಜತೆ ಕಾರ್ಯದರ್ಶಿಗಣೇಶ್ ಪೂಜಾರಿ ಮೂಡುಪೆರಾರ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಪ್ರಸಾದ್ ಎಂ. ಕೆ., ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾಶಿವ ಊರ, ಗೆಜ್ಜೆಗಿರಿ ಕ್ಷೇತ್ರದ ಬೆಳ್ತಂಗಡಿಯ ಸಂಚಾಲಕ ನಿತ್ಯಾನಂದ ನಾವರ, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್. ಕೋಟ್ಯಾನ್,ಸಂಘದ ಮಾಜಿ ಅಧ್ಯಕ್ಷರುಗಳಾದ ವಸಂತ ಸಾಲಿಯಾನ್ ಕಾಪಿನಡ್ಕ, ಗಂಗಾಧರ ಮಿತ್ತಮಾರು, ಜಯರಾಮ ಬಂಗೇರ ಹೇರಾಜೆ, ಉಪಾಧ್ಯಕ್ಷ ಸುಂದರ ಪೂಜಾರಿ,,ಕಾರ್ಯಕಾರಿ ಸಮಿತಿಯ ನಿರ್ದೇಶಕರು, ಮಹಿಳಾ ವೇದಿಕೆ, ಯುವಬಿಲ್ಲವ ವೇದಿಕೆ ಯುವವಾಹಿನಿ ರಿ. ಬೆಳ್ತಂಗಡಿ ಹಾಗೂ ವೇಣೂರು ಘಟಕದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಕಾರ್ಯಕಾರಿ ಸಮಿತಿ ಸದಸ್ಯ ಸಂಘದ ಮಾಜಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗೆಜ್ಜೆಗಿರಿ ಕ್ಷೇತ್ರದ ಜಾತ್ರಾ ಸಮಿತಿಯ ಬೆಳ್ತಂಗಡಿ ಸಂಚಾಲಕ ಸಂದೀಪ್ ನೀರಲ್ಕೆ ನಿರೂಪಿಸಿದರು.ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಕಾರ್ಯಕಾರಿ ಸಮಿತಿಗೆ ತಾಲೂಕಿನಿಂದ ಮಹಿಳಾ ಸದಸ್ಯರಾಗಿ ರಾಜಶ್ರೀ ರಮಣ್ ಮತ್ತು ಶಾಂತಾ ಬಂಗೇರ ಇವರನ್ನು ನೇಮಕ ಮಾಡಲಾಯಿತು.