Site icon Suddi Belthangady

ಸಿಯೋನ್ ಆಶ್ರಮ ರಜತ ಮಹೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಜಿರೆ: ಸಿಯೋನ್ ಆಶ್ರಮ ನಿರ್ಗತಿಕ, ಮಾನಸಿಕ ಅಸ್ವಸ್ಥರ ಮನೆ ತನ್ನ ಸ್ಥಾಪನೆಯ 25 ವರ್ಷಗಳನ್ನು 2024 ಮಾರ್ಚ್ ತಿಂಗಳ 22ರಂದು ಪೂರ್ಣಗೊಳಿಸಲಿದೆ.

ಸಿಯೋನ್ ಆಶ್ರಮದ ಬೆಳ್ಳಿಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ 50ರ ಸುವರ್ಣ ಸಂಭ್ರಮ ಈ ಎರಡು ಸುಸಂಧರ್ಭಗಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಡುವಂತೆ ವಿಭಿನ್ನವಾಗಿ ಆಚರಿಸಲು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಘನಸಾರಥ್ಯದಲ್ಲಿ ಸಮಾಲೋಚಿಸಿ ಮುಂದಡಿ ಇಟ್ಟಿದ್ದು, 22 ಮಾರ್ಚ್ 2024ರಂದು ಜರುಗುವ ಈ ಕಾರ್ಯಕ್ರಮದಲ್ಲಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

ಸಿಯೋನ್ ರಜತಮಹೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.05ರಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಡಾ.ಹೇಮಾವತಿ ವಿ.ಹೆಗ್ಗಡೆಯವರು ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಿಯೋನ್ ಆಶ್ರಮ ಆಡಳಿತ ನಿರ್ದೇಶಕ ಡಾ.ಯು.ಸಿ.ಪೌಲೋಸ್‌ರವರು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಎಂ.ಪಿ.ಶ್ರೀನಾಥ್, ರಜತಮಹೋತ್ಸವ ಸ್ವಾಗತ ಸಮಿತಿಯ ಎಲ್ಲಾ ಸದಸ್ಯರುಗಳು, ಸಂಸ್ಥೆಯ ಆಡಳಿತ ಮಂಡಳಿಯವರು, ಹಿತೈಷಿಗಳು, ಸಿಬ್ಬಂದಿ ವರ್ಗದವರು ಹಾಗೂ ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.

Exit mobile version