Site icon Suddi Belthangady

ಮಂಜೊಟ್ಟಿ ಸಮೀಪ ದ್ವಿಚಕ್ರ ವಾಹನ-ಬಸ್‌ ನಡುವೆ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಯುವಕ ಸಾವು

ಬೆಳ್ತಂಗಡಿ: ಮಂಜೊಟ್ಟಿ ಸಮೀಪ ದ್ವಿಚಕ್ರ ವಾಹನ-ಶ್ರೀದುರ್ಗ ಬಸ್‌ ನಡುವೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಾಯಗೊಂಡ ಘಟನೆ ಮಂಜೊಟ್ಟಿ ಸಮೀಪ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಸವಾರ ಬಸ್ಸಿನಡಿ ಸಿಲುಕಿದ್ದು ಸ್ಥಳೀಯರು ಹರಸಾಹಸ ಪಟ್ಟು ಹೊರತೆಗೆದು ಉಜಿರೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡುವ ಮಾರ್ಗದ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ದ್ವಿಚಕ್ರ ವಾಹನ ಸವಾರ ವಾಹನ ಒಂದನ್ನು ಓವರ್ಟೇಕ್ ಮಾಡುವಾಗ ಎದುರಿಂದ ಬಂದ ಬಸ್ ಗೆ ಡಿಕ್ಕಿ ಹೊಡೆದಿದ್ದಾರೆಂದು ತಿಳಿದುಬಂದಿದೆ.

ಮೃತ ಯುವಕ ಮಂಜೊಟ್ಟಿ ಸಮೀಪದ ಪರಾರಿ ನಿವಾಸಿ ಉಮೇಶ್ ಪೂಜಾರಿಯವರ ಮಗ ಧರಣೇಂದ್ರ ಪೂಜಾರಿ (24) ಎಂದು ಗುರುತಿಸಲಾಗಿದೆ.

Exit mobile version