ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ರಜತ ಸಂಭ್ರಮ ಆಚರಣೆಯನ್ನು ಫೆ.11ರ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಪರವಾಗಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ದ.ಕ ಸಂಸದ ನಳೀನ್ ಕುಮಾರ್ ಕಟೀಲ್ ಅವರಿಗೆ ಅವರನ್ನು ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.
ಈ ಸಂದರ್ಭದಲ್ಲಿ ಜ್ಞಾನ ನಿಲಯದ ವಂದನಿಯ ಫಾ.ಜೋಬಿ ಪುಲ್ಲಾಟ್ಟ್, ಸೇಬಾಷ್ಟಿಯನ್ ಪಿ ಸಿ, ಪಿ ಆರ್ ಓ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಸದಸ್ಯರು ಜೊತೆಯಲ್ಲಿದ್ದರು.