Site icon Suddi Belthangady

ಕಾಶಿಪಟ್ಣ ಗ್ರಾ.ಪಂ ಗ್ರಾಮ ಸಭೆ

ಕಾಶಿಪಟ್ಣ: ಕಾಶಿಪಟ್ಣ ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ಗ್ರಾಮ ಸಭೆಯು ಜ. 31ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣ ಇವರ ಅದ್ಯಕ್ಷತೆಯಲ್ಲಿ ಜರಗಿತು.

ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರು ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.

ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ಕಂದಾಯ, ಅರಣ್ಯ, ಪಶು ಸಂಗೋಪನೆ, ಮೆಸ್ಕಾಂ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಗಳು ಭಾಗವಹಿಸಿ ಮಾಹಿತಿ ನೀಡಿದರು.

ನೆಲ್ಲಿಗುಡ್ಡೆ ಪಡ್ದನದಡ್ಕ ರಸ್ತೆ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದರು.ಕಿರೋಡಿ ಎಂಬಲ್ಲಿ ವಿದ್ಯುತ್ ಪರಿವರ್ತಕ ಬದಲಾಯಿಸಲು ಕೋರಿದರು.ಕಿರೋಡಿ ಪೈಪ್ ಲೈನ್ ಕೆಲಸ ಸರಿಯಾಗದ ಬಗ್ಗೆ ದೂರಲಾಯಿತು.ಚಿರತೆ ಹಾವಳಿ ನಿಯಂತ್ರಿಸಲು ಕೋರಲಾಯಿತು.ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಲು ಆಗ್ರಹಿಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಎಚ್ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಲೀನಾ ಬೆನೆಡಿಕ್ಟಾ ಲೋಬೊ ವರದಿ ಮಂಡಿಸಿದರು.ಸಿಬ್ಬಂದಿಗಳು ಸಹಕರಿಸಿದರು.

Exit mobile version