Site icon Suddi Belthangady

ಮಲವಂತಿಗೆಯಲ್ಲಿ ಶಿವಾನಿ ಹಾಳೆ ತಟ್ಟೆ ಘಟಕ ಉದ್ಘಾಟನೆ

ಮಲವಂತಿಗೆ: ಶಿವಾನಿ ಸಂಜೀವಿನಿ ಮಹಿಳಾ ಒಕ್ಕೂಟ (ರಿ) ಮಲವಂತಿಗೆ ಇದರ ಪ್ರಾಯೋಜಕತ್ವದಲ್ಲಿ ಶಿವಾನಿ ಹಾಳೆ ತಟ್ಟೆ ಉತ್ಪಾದಕರ ಗುಂಪಿನ ಹಾಳೆ ತಟ್ಟೆ ಉತ್ಪಾದನೆಯ ಉದ್ಘಾಟನೆಯನ್ನು ಜ.30ರಂದು ಮಲವಂತಿಗೆಯ ಮಿತ್ತುಟ್ಟು ಎಂಬಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮಿ, ಮೇಲ್ವಿಚಾರಕ ಜಯಾನಂದ, ಉತ್ಪಾದಕರ ಗುಂಪಿನ ಅಧ್ಯಕ್ಷೆ ಸುಜಾತ, ಉಪಸ್ಥಿತರಿದ್ದರು.

ಎಂಬಿಕೆ ಸ್ವಾಗತಿಸಿ, ಕೃಷಿ ಉದ್ಯೋಗ ಸಖಿಯಾದ ಪದ್ಮಾವತಿ ವಂದಿಸಿದರು.

Exit mobile version