ಉಜಿರೆ: ಬೆಂಗಳೂರಿನ ಎಂಪವರ್ ಮತ್ತು ಬಯ್ಯರ್ ಕಂಪೆನಿ ಜ.19ರಂದು ಏರ್ಪಡಿಸಿದ ಅಟಲ್ ಇನೋವೇಷನ್ 2023-24 ರಾಜ್ಯಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಾದ ವಿನಾಯಕ ಹೆಗಡೆ ಮತ್ತು ರಕ್ಷಾ ತಯಾರಿಸಿದ ಸ್ಮಾರ್ಟ್ ವಾಶ್ ರೂಮ್ ಮಾದರಿ ಪ್ರಥಮ ಸ್ಥಾನ ಪಡೆದಿದೆ.
ಹಾಗೂ ಸುಮಂತ್ ಮತ್ತು ಮಾನ್ಯ ತಯಾರಿಸಿದ ಮಾದರಿ ಆಟೋ ಟ್ರಾಫಿಕ್ ಸಿಗ್ನಲ್ ಲೈಟ್ ವಿಶೇಷ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ.
ಸ್ಪರ್ಧೆಗೆ ವಿಜ್ಞಾನ ಮಾದರಿ ತಯಾರಿಕೆಗೆ ಉಜಿರೆ ಶ್ರೀ ಧ.ಮಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕ ನಿಕಿತ್ ಜೈನ್, ಅಟಲ್ ಟಿಕರಿಂಗ್ ಶಿಕ್ಷಕಿ ನೀತಾ ಜೈನ್, ಉಷಾ ಕುಮಾರಿ ಮಾರ್ಗದರ್ಶನ ನೀಡಿ ಸ್ಪರ್ಧೆಗೆ ತರಬೇತುಗೊಳಿಸಿರುತ್ತಾರೆ.