Site icon Suddi Belthangady

ಫೆ.09-11: ಅರಸಿನಮಕ್ಕಿ ಕಾಪು ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆ

ಅರಸಿನಮಕ್ಕಿ: ಕಾಪು ಉಪ್ಪರಡ್ಕ ದೈವಸ್ಥಾನದ ದೈವಗಳ ವಾರ್ಷಿಕ ಜಾತ್ರೆಯು ಫೆ.09ರಂದು ಕಾಪು ದೇಸ್ಥಾನದಲ್ಲಿ , ಫೆ.10,11ರವರೆಗೆ ಉಪ್ಪರಡ್ಕದಲ್ಲಿ ಜರುಗಲಿದೆ.

ಫೆ.8ರಂದು ಬೆ.8ರಿಂದ ಕಾಪು ಸ್ಥಾನದಲ್ಲಿ ಗಣಹೋಮ, ಫೆ.9ರಂದು ಬೆ.6.30ರಿಂದ ಸಂಜೆಯ ತನಕ ತೋರಣ, ಭಂಡಾರ ಹಿಡಿಯುವುದು ಮತ್ತು ಬ್ರಹ್ಮರು, ಕುಮಾರ, ಪಾಲೇಶರಾಯ, ಪಾಳೆದುಳ್ಳಾಲ್ತಿ, ಮುಗೇರ ಪಂಜುರ್ಲಿ ದೈವಗಳ ನೇಮೋತ್ಸವ.

ಫೆ.10ರಂದು ಬೆ.10ಕ್ಕೆ ತೋರಣ ಮುಹೂರ್ತ, ಮ.2ಕ್ಕೆ ಮೆದಿನದಿಂದ ರುದ್ರ ಚಾಮುಂಡಿ ದೈವದ ಭಂಡಾರ ತರುವುದು, ಸಂ.4ಕ್ಕೆ ಹೊಸ್ತೋಟದಿಂದ ಕೊಡಮಣಿತ್ತಾಯ ದೈವದ ಭಂಡಾರ ತರುವುದು, ಸಂ.6ಕ್ಕೆ ಗುತ್ತುವಿನಿಂದ ಶಿರಾಡಿ ದೈವದ ಭಂಡಾರ ತರುವುದು, ರಾತ್ರಿ 10ರಿಂದ ಬೆಳಗ್ಗಿನ ತನಕ ಬ್ರಹ್ಮರು, ರುದ್ರಚಾಮುಂಡಿ, ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ಇತ್ಯಾದಿ ದೈವಗಳ ನೇಮೋತ್ಸವ.

ಫೆ.11ರಂದು ಬೆ.9ರಿಂದ ಸಂಜೆಯ ತನಕ ಕೊಡಮಣಿತ್ತಾಯ, ಶಿರಾಡಿ, ಬಚ್ಚನಾಯ್ಕ, ಗುಳಿಗ ಇತ್ಯಾದಿ ದೈವಗಳ ನೇಮೋತ್ಸವ, ಮ.1ಗಂಟೆಗೆಯಿಂದ ಅನ್ನಸಂತರ್ಪಣೆ ನಡೆಯಲಿರುವುದು.

ಫೆ.12ರಂದು ಬೆ.8ರಿಂದ ಶುದ್ಧ ಕಲಶ, ತಂಬಿಲ ಸೇವೆ ನಡೆಯಲಿರುವುದು ಎಂದು ಕಾರ್ಯದರ್ಶಿ ಕೆ.ಗಂಗಾಧರ ಕುಲಾಲ್, ಗೌರವಾಧ್ಯಕ್ಷ ಕೆ.ಶಂಕರನಾರಾಯಣ ಭಟ್, ಅಧ್ಯಕ್ಷ ಧರ್ಣಪ್ಪ ಗೌಡ, ಜೊತೆ ಕಾರ್ಯದರ್ಶಿ ರಂಜಿತ್ ಶೆಟ್ಟಿ, ಖಾಯಂ ಸದಸ್ಯ ರಘುಪತಿ ಹೆಬ್ಬಾರ್ ಹೊಸ್ತೋಟ, ಉಪಾಧ್ಯಕ್ಷ ಐತಪ್ಪ ಕುಲಾಲ್, ಪಿ.ಪಾಂಡುರಂಗ ಮರಾಠೆ ಪುಂಡಾಜೆ, ಪಿ.ರಾಜರಾಮ ಕಾರಂತ ಗುತ್ತು ಮತ್ತು ಆಡಳಿತ ಮಂಡಳಿ ಸದಸ್ಯರು ತಿಳಿಸಿರುತ್ತಾರೆ.

Exit mobile version