ಧರ್ಮಸ್ಥಳ: ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಡಲದ ಸಾಂಘಿಕ್ ಕನ್ಯಾಡಿ ಶಾಲೆಯ ಮೈದಾನದಲ್ಲಿ ನಡೆಯಿತು.
ಸಾಂಘಿಕ್ ನಂತರ ಸ್ವಯಂಸೇವಕರೆಲ್ಲರೂ ಅಯೋಧ್ಯೆ ಶ್ರೀರಾಮ ಮಂದಿರ ರೇಖಾಚಿತ್ರದ ಮೇಲೆ ರಾಮಜ್ಯೋತಿಯನ್ನು ಬೆಳಗಿಸಲಾಯಿತು.
ಅಯೋಧ್ಯೆ ಕರಸೇವಕರಾಗಿ ಭಾಗವಹಿಸಿದ್ದ ಶ್ರೀ ವಿನಾಯಕ ರಾವ್ ಕನ್ಯಾಡಿ ಮೊದಲ ಜ್ಯೋತಿ ಬೆಳಗಿಸುವುದರ ಮೂಲಕ ರಾಮಜ್ಯೋತಿ ಬೇಳಗಿಸುವುದಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಅಯೋಧ್ಯೆ ಶ್ರೀ ರಾಮ ಮಂದಿರ ನಮ್ಮೆಲ್ಲರ ಸಾಹಸದ ಮತ್ತು ಸ್ವಾಭಿಮಾನದ ಪ್ರತೀಕವಾಗಿದೆ ಎಂದು ಹೇಳಿದರು.
ಕನ್ನಾಜೆಯ ಪ್ರತಿಭಾನ್ವಿತ ಕಲಾವಿದೆ ಕುಮಾರಿ ಸುರಕ್ಷಾ ಆಚಾರ್ಯ ರಚಿಸಿದ ಅಯೋಧ್ಯೆಯ ರೇಖಾಚಿತ್ರದ ಮೇಲೆ ಸುಮಾರು 2500 ದೀಪಗಳನ್ನು ಬೆಳಗಿಸಲಾಯಿತು.
ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುದರ್ಶನ್ ಕನ್ಯಾಡಿ, ಪೃಥ್ವಿಶ್ ಧರ್ಮಸ್ಥಳ, ಪ್ರಜ್ವಲ್ ನಿಡ್ಲೆ, ರವಿ ಭಟ್ ಪಜಿರಾಡ್ಕ, ಸಚಿನ್ ಕಲ್ಮಂಜ, ಸೃಜನ್, ಸಂತೋಷ್ ಸತ್ಯನಪಲ್ಕೆ ಹಾಗೂ ಸೂರ್ಯಾನಂದ ರಾವ್ ದೊಂಡೋಲೆ, ನವೀನ್ ಕನ್ಯಾಡಿ, ಸುಧಾಕರ್ ಹಾಳೆದಡಿ ಉಪಸ್ಥಿತರಿದ್ದರು.