Site icon Suddi Belthangady

ಶಿಬಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಕೊಠಡಿಗಳ ಉದ್ಘಾಟನಾ ಸಮಾರಂಭ

ಶಿಬಾಜೆ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಕೊಠಡಿಗಳ ಉದ್ಘಾಟನಾ ಸಮಾರಂಭ ಜ.27ರಂದು ನಡೆಯಿತು.

ಪಂಚಾಯತ್ ಅಧ್ಯಕ್ಷರಾದ ರತ್ನ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಕೊಠಡಿಗಳ ಉದ್ಘಾಟನೆಯ ನಂತರ ದೀಪ ಬೆಳಗಿಸಿ ಮಾತನಾಡಿದ ಅವರು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಾಲೆಗಳಿಗೆ ಉತ್ತಮ ಕೊಠಡಿ ಇನ್ನಿತರ ಮೂಲಭೂತ ಸೌಕರ್ಯ ಅಗತ್ಯ ಹೆಚ್ಚು ಮಕ್ಕಳು ಈ ಶಾಲೆಗೆ ಬರುವಂತಾಗಲಿ ಎಂದು ಶುಭ ಹಾರೈಸಿದರು.ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರ ಕೇಸರಿ ಮಾತನಾಡಿ ಸವಲತ್ತುಗಳು ಪೋಷಕರ ಮತ್ತು ಮಕ್ಕಳ ಸಂಬಂಧ ಯಾವ ರೀತಿ ಪ್ರೀತಿಯಿಂದ ಕೂಡಿರಬೇಕು ಎಂದು ತಿಳಿಸಿದರು.

ಕಾರ್ಯನಿಮಿತ್ತ ತಡವಾಗಿ ಆಗಮಿಸಿದ ಶಾಸಕರಾದ ಹರೀಶ್ ಪೂಂಜಾ ಮಾತನಾಡಿ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ರತೀಶ್ ರವರ ನಿರಂತರ ಪರಿಶ್ರಮದಿಂದ ನನ್ನ ಬಳಿ ಹತ್ತು ಹಲವು ಬಾರಿ ಅನುದಾನ ನೀಡಬೇಕೆಂದು ಹಠ ಮಾಡಿ ಕೊನೆಗೆ ವಿವೇಕ ಕೊಠಡಿಗಳ ಯೋಜನೆಯ ಮೂಲಕ ಬರುವ ಅನುದಾನವನ್ನು ಅಂದಿನ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ರವರ ಸಹಾಯದಿಂದ ಮಂಜೂರು ಮಾಡಿಸಿದೆ ಅದರ ಫಲವಾಗಿ ಇಂದು ಉತ್ತಮ ಕೊಠಡಿ ನಿರ್ಮಾಣವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ದಿನಕರ್ ಕುರುಪ್, ಸದಸ್ಯರಾದ ವಿವೇಕ ಕೊಠಡಿಗಳ ಉದ್ಘಾಟನಾ ಸಮಿತಿಯ ಅಧ್ಯಕ್ಷ ರತೀಶ್.ಬಿ, ಯಮುನಾ, ವಿನಯಚಂದ್ರ, ವನಿತಾ ವಿ ಶೆಟ್ಟಿಗಾರ್, ಪೆರ್ಲ ಕ್ಲಸ್ಟರ್ ಸಿ.ಆರ್.ಪಿ ವಿಲ್ಫ್ರೆಡ್ ಪಿಂಟೋ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್, ನೂಜಿಬಾಳ್ತಿಲ ಬೆಥನಿ ವಿಧ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಟಿ, ಶಾಲಾ ಮುಖ್ಯೋಪಾಧ್ಯಾಯರಾದ ಭಿಮನಾಯ್ಕ.ಯು, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಯೋಗೀಶ್ ಬೇಂಗಳ, ಹಳೇ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಗೌಡ ಬೇಂಗಳ, ರಾಜು ಟಿ, ಪ್ರವೀಣ್ ಟಿ ಉಪಸ್ಥಿತರಿದ್ದರು.

ವಿವೇಕ ಕೊಠಡಿ ನಿರ್ಮಾಣಕ್ಕೆ ಶ್ರಮಿಸಿದ ಶಾಸಕರನ್ನು ಶಾಲೆಯಲ್ಲಿ ಶಿಕ್ಷರಾಗಿ ಸೇವೆ ಸಲ್ಲಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ನಾಗೇಶ್, ಮಮತಾ, ನಾಗಮ್ಮ, ಶಾಂತಾ ರವರನ್ನೂ ಹಾಗೆಯೇ ಈ ಶಾಲೆಯಲ್ಲಿ ಇದುವರೆಗೂ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಪ್ರಮಿತಾ, ಗೀತಾ, ಲೋಲಾಕ್ಷಿ, ದಿವ್ಯ, ಧನ್ಯಶ್ರಿ, ಸುಜಾತ, ಲೋಕೇಶ್, ರಶ್ಮಿ, ಯೋಗಿತಾ, ಭಾಗೀರತಿ, ಇಂದಿರಾ, ವಸಂತ್ ರವರನ್ನು ಸನ್ಮಾನಿಸಲಾಯಿತು.

ಹಾಗೆಯೇ ಶಾಲೆಗೆ ವಿವಿಧ ರೀತಿಯ ಕೊಡುಗೆ ನೀಡಿದ ರತೀಶ್.ಬಿ, ಸ್ಕರಿಯ, ಜಯರಾಂ ಪೂಜಾರಿ ರವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಪ್ರಾರ್ಥನೆಯನ್ನು ವರ್ಷ ಮತ್ತು ತಂಡ, ಸ್ವಾಗತವನ್ನು ಯೋಗೀಶ್ ಬೇಂಗಳ,ವರದಿಯನ್ನು ಭೀಮನಾಯ್ಕ, ಧನ್ಯವಾದವನ್ನು ರೊನಾಲ್ಡೋ, ನಿರೂಪಣೆಯನ್ನು ಲೋಕೇಶ್ ಶಿಬಾಜೆ ಮತ್ತು ಕೇಶವ ಗೌಡ ಪಾದೆಗುಡ್ಡೆ ನೆರವೇರಿಸಿದರು.

Exit mobile version