ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಸಹಾಯಕರ ಸಂಘದ ಸಭೆಯು ಇಂದು (ಜ.27) ಪುತ್ತೂರು ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಸುಮಾರು 197 ಮಂದಿ ಗ್ರಾಮ ಸಹಾಯಕರು ಭಾಗವಹಿಸಿ, ಕೋರ್ಟ್ ಕೇಸ್ ವಿಷಯದಲ್ಲಿ ಮಹತ್ವದ ಚರ್ಚೆ ಮಾಡಿ ಸರ್ವಾನುಮತದಿಂದ ಅಂಗೀಕಾರ ಮಾಡಿ ಯಶಸ್ವಿಯಾಗಿ ಮಾಡಲು ತೀರ್ಮಾನಿಸಲಾಗಿದೆ.ಕೋರ್ಟ್ ಕೇಸ್ ವಿಷಯವನ್ನು ಮೈಕಲ್ ರವರು ಸವಿಸ್ತಾರವಾಗಿ ತಿಳಿಸಿದರು.
ದ.ಕ.ಜಿಲ್ಲೆಯ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಪೂಜಾರಿಯವರ ಪ್ರಾರ್ಥನೆಯಾಗಿ, ಪ್ರಾಸ್ತಾವಿಕವಾಗಿವಾಗಿ ಮಾತನಾಡಿದರು.ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯ್ಕ್ ರವರು ಸ್ವಾಗತಿಸಿ, ಗೌರವಾಧ್ಯಕ್ಷ ಸುಧೀರ್ ದೇವಾಡಿಗ, ಜಿಲ್ಲೆಯ ಅಧ್ಯಕ್ಷರಗಳು, ಕಾರ್ಯದರ್ಶಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಕೋಶಾಧಿಕಾರಿ ಭಾಸ್ಕರ್ ನೀರುಮಾರ್ಗ ಹಲವಾರು ವಿಷಯಗಳನ್ನು ಸೂಚಿಸಿದರು.ಪ್ರಧಾನ ಕಾರ್ಯದರ್ಶಿ ರಾಘವ ಗೌಡ ವರದಿ ವಾಚಿಸಿದರು.ಉಪಾಧ್ಯಕ್ಷರು ಗುಣಕರ ಹೆಗ್ಡೆ ಧನ್ಯವಾದವಿತ್ತರು.