ವೇಣೂರು: ಫೆಬ್ರವರಿ ತಿಂಗಳಿನಲ್ಲಿ ವೇಣೂರಿನಲ್ಲಿ ನಡೆಯಲಿರುವ ಬಾಹುಬಲಿ ಮಹಾಮಸ್ತಕಾಭಿಷೇಕದ ಪ್ರಯುಕ್ತ ವೇಣೂರಿನಿಂದ ಮೂಡಬಿದ್ರೆಯವರೆಗಿನ ರಸ್ತೆಯ ಇಕ್ಕೆಲಗಲ್ಲಿರುವ ಕಸವನ್ನು ಸ್ವಚ್ಚಗೊಳಿಸುವ ಶ್ರಮದಾನ ಕಾರ್ಯಕ್ರಮದ ಅಂಗವಾಗಿ ಜ.27ರಂದು ಹೊಸಂಗಡಿಯ ರಾಜ್ಯ ಹೆದ್ದಾರಿ ಸ್ವಚ್ಛತಾ ಶ್ರಮದಾನ ನಡೆಯಿತು.
ಮೂಡಬಿದ್ರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಸುಮಾರು 80 ವಿದ್ಯಾರ್ಥಿಗಳು, ಪೆರಿಂಜೆ ಎಸ್ ಡಿ ಎಂ ಪ್ರೌಢ ಶಾಲಾ 50 ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದರು.
ಶ್ರೀ ಕ್ಷೇತ್ರ ಪಡ್ಯರಬೆಟ್ಟ ದೈವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಎ.ಜೀವಂದರ ಕುಮಾರ್ ಶ್ರಮದಾನಕ್ಕೆ ಚಾಲನೆ ನೀಡಿದರು.ಜಿ.ಪ.ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಎಕ್ಸಲೆಂಟ್ ಸಂಸ್ಥೆಯ ಹರೀಶ್ ಶೆಟ್ಟಿ, ಹೊಸಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್, ಹರಿಪ್ರಸಾದ್, ಶಾಲೆಯ ಶಿಕ್ಷಕರು, ಎಕ್ಸೆಲೆಂಟ್ ಸಂಸ್ಥೆಯ ಉಪನ್ಯಾಸಕರು, ಸಾರ್ವಜನಿಕರು, ಪಂಚಾಯತ್ ಸಿಬ್ಬಂದಿಗಳು ಶ್ರಮದಾನದಲ್ಲಿ ಭಾಗವಹಿಸಿದರು.
ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.