ಬೆಳ್ತಂಗಡಿ: “ಹೃದಯ ಹಾಗೂ ಮನಸ್ಸಿನಿಂದ ನಾವೆಲ್ಲ ಒಂದಾಗೋಣ, ಯಾರೂ ನಮ್ಮನ್ನು ಮುರಿಯಲು ಬಿಡದಿರೋಣ, ಆಗ ಮಾತ್ರ ನಾವು ಸ್ವತಂತ್ರ್ಯರು ಎಂದು ಅನಿಸಿಕೊಳ್ಳುವುದು” ಎಂಬ ತತ್ವದ ಅಡಿಯಲ್ಲಿ ಮನ್ ಶರ್ ವಿದ್ಯಾ ಸಂಸ್ಥೆ ಗೇರುಕಟ್ಟೆ ಇಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ವಿದ್ಯಾರ್ಥಿಗಳ ಪರೇಡ್ ಮುಖೇನ ವಿದ್ಯಾಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ ಇವರು ಧ್ವಜಾರೋಹಣವನ್ನು ನೆರವೇರಿಸಿದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕೌಸರ್ ಪಲ್ಲಾದೆ ಇವರು ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಕಾರ್ಯವನ್ನು ನಿರ್ವಹಿಸಿದರು.ಪುಟಾಣಿ ಮಕ್ಕಳಿಂದ ಕಲರವಭರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಉಷಾ ಸ್ವಾಗತಿಸಿದರು.ಪಿಯುಸಿ ಉಪನ್ಯಾಸಕಿ ಹಂಸಶ್ರೀ ಬಿ.ಆರ್ ನಿರೂಪಿಸಿದರು.