Site icon Suddi Belthangady

ಉಜಿರೆ ಅನುಗ್ರಹದಲ್ಲಿ ವಿಜ್ರಂಭಣೆಯ ಗಣರಾಜ್ಯೋತ್ಸವ ಸಂಭ್ರಮ

ಉಜಿರೆ: ಜ.26ರಂದು ರಂದು ರಾಷ್ಟ್ರೀಯ ಹಬ್ಬವಾದ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅನುಗ್ರಹ ಶಿಕ್ಷಣ ಸಂಸ್ಥೆ, ಉಜಿರೆಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.ಭಾರತೀಯ ಸೈನಿಕರಾಗಿ ನಿವೃತ್ತಿಯನ್ನು ಹೊಂದಿರುವ ಪ್ರಾನ್ಸಿಸ್ ಜೆ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ ಗೌರವ ರಕ್ಷೆಯನ್ನು ಸ್ವೀಕರಿಸಿ ಶುಭ ಹಾರೈಸಿದರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಪ್ರಾಂಶುಪಾಲರಾದ ಪೂಜ್ಯ ರೆ!ಫಾ! ವಿಜಯ್ ಲೋಬೋ ರವರು ಪ್ರಜಾಪ್ರಭುತ್ವ ನಮ್ಮ ದೇಶದ ಸಂವಿಧಾನದಲ್ಲಿ ಅಡಕವಾಗಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ನಮ್ಮನ್ನು ಜಾಗೃತಗೊಳಿಸುವುದೆಂದು ತಿಳಿಸುತ್ತಾ ಸೌಹಾರ್ಧಯುತವಾಗಿ ಏಕತೆಯಿಂದ ಬಾಳಿ ಬದುಕಬೇಕೆಂಬ ಸಂದೇಶ ನೀಡಿದರು.

ಕಾರ‍್ಯಕ್ರಮದ ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟನಿ ಫೆರ್ನಾಂಡೀಸ್, ಕಾರ್ಯದರ್ಶಿ ಲಿಗೋರಿ ವಾಸ್, ಸ್ಥಳೀಯ ಪಂಚಾಯತ್ ಸದಸ್ಯರುಗಳಾದ ಅನಿಲ್ ಡಿ’ಸೋಜಾ ಹಾಗೂ ಜಾನೆಟ್ ರೊಡ್ರಿಗಸ್ ರವರು ಉಪಸ್ಥಿತರಿದ್ದರು.ಹಾಗೂ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ಪಥ ಸಂಚಲನ ಹಾಗೂ ಸಾಮೂಹಿಕ ಕವಾಯತು ನಡೆಯಿತು.ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡಿದರು.ವಿದ್ಯಾರ್ಥಿನಿ ಅಭಿಜ್ಞಾ ಪ್ರಜಾಪ್ರಭುತ್ವ ದಿನದ ಮಹತ್ವದ ಬಗ್ಗೆ ಭಾಷಣ ಮಾಡಿದಳು.

ಕಾರ‍್ಯಕ್ರಮವನ್ನು ಶಿಕ್ಷಕಿಯಾದ ಐರಿನ್ ರೊಡ್ರಿಗಸ್‌ರವರು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Exit mobile version