ಪುಂಜಾಲಕಟ್ಟೆ: ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ರಝಾನಗರ ಇಲ್ಲಿ 75ನೇ ಗಣರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಅಬೂಬಕ್ಕರ್ ಸಿದ್ದೀಕ್ ಸಖಾಫಿ ಉಸ್ತಾದ್ ಸದರ್ ಮುಅಲ್ಲಿಂ ಬುರೂಜ್ ಸುನ್ನಿ ಮದ್ರಸ ರಝಾನಗರ ನೇರವೇರಿಸಿದರು.
ಕವಾಯತು, ದೇಶಭಕ್ತಿಗೀತೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಗೌರವಿಸಲಾಯಿತು.ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಖ್ ರಹ್ಮತ್ತುಲ್ಲಾ ಇಂದಿನ ದಿನದ ಮಹತ್ವನ್ನು ತಿಳಿಸಿ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಬದ್ರಿಯಾ ಜುಮಾ ಮಸ್ಜಿದ್ ಬಸ್ತಿಕೋಡಿ ಮತ್ತು ಬುರೂಜ್ ಶಾಲಾ ಉಸ್ತಾದರಾದ ತಾಜುದ್ದೀನ್ ಹನೀಫ್, ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್, ಶೋಭಾ.ಡಿ, ವನಿತಾ, ಖುರ್ಷಿದ್, ಚಂದ್ರಾವತಿ, ರೂಹಿ, ಮಮತಾ ಆರ್, ಚೇತನ ಜೈನ್, ಎಲ್ಸಿ ಲಸ್ರಾದೋ, ಪವಿತ್ರಾ, ವಿಜಯಲಕ್ಮೀ ,ಜಲಾಲುದ್ದೀನ್, ರಝೀಯಾ ಎಸ್.ಪಿ, ನೂರ್ಜಹಾನ್ ಶಾಲಾ ನಾಯಕ ಮುಹಮ್ಮದ್ ನಹೀಂ, ಉಪ ನಾಯಕ ಅನ್ವಿತ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಶುಭ ದಿನದಲ್ಲಿ ವರ್ಲ್ಡ್ ರೆಕಾರ್ಡ್ ಕರಾಟೆ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕ ವಿತರಿಸಲಾಯಿತು.ವಿದ್ಯಾರ್ಥಿಗಳಿಂದ ಹಲವು ದೇಶ ಭಕ್ತಿ ಗೀತೆ, ಭಾಷಣ, ರಾಷ್ಟ್ರೀಯತೆಯನ್ನು ಸೂಚಿಸುವ ನೃತ್ಯ ಪ್ರದರ್ಶನ ನಡೆಯಿತು.
ಬಂದಂತಹ ಅತಿಥಿಗಳನ್ನು ಕಿಶ್ಪಾ ಝಬೀನ್ ಸ್ವಾಗತಿಸಿದರು.ಇಸ್ರತ್ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.ವಿದ್ಯಾರ್ಥಿನಿ ಮಲೀಹಾ ಕಾರ್ಯಕ್ರಮ ನಿರೂಪಿಸಿದರು.