Site icon Suddi Belthangady

ಬೆಳ್ತಂಗಡಿ: ತಾ.ಪಂ ನಲ್ಲಿ ರಾಷ್ಟ್ರೀಯ ಮತದಾರರ ದಿನದ ಕುರಿತು ಕಾನೂನು ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ.ಕ., ಬೆಳ್ತಂಗಡಿ ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ ವಕೀಲರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನ-2024 ಪ್ರಯುಕ್ತ ಕಾನೂನು ಮಾಹಿತಿ ಕಾರ್ಯಕ್ರಮವು ಜ.25 ರಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಉದ್ಘಾಟಿಸಿ ಮಾತನಾಡಿ ಮತದಾನ ಮಾಡುವಂತಹದ್ದು ನಮ್ಮ ಹಕ್ಕು ಅದೇ ರೀತಿ ಅದು ನಮ್ಮ ಕರ್ತವ್ಯ ಎಂದು ಮತದಾನದ ಮಹತ್ವವನ್ನು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದರಾದದ ಪೃಥ್ವಿ ಸಾನಿಕಂ ಸಂವಿಧಾನದ ಬಗ್ಗೆ ಮಾತನಾಡಿ ಮತದಾರರ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.

ಕ್ಷೇತ್ರ ಶಿಕ್ಷಣ ಕಚೇರಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಯ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.

ವೇದಿಕೆಯಲ್ಲಿ ತಾಲೂಕು ಪಂಚಾಯತ್‌ ವ್ಯವಸ್ಥಾಪಕ ಪ್ರಶಾಂತ್ ಡಿ, ಲೆಕ್ಕಾಧಿಕಾರಿ ಗಣೇಶ್‌, ನಗರ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೋಟ್ಯಾನ್, ಬಿಸಿಯಂ ವಿಸ್ತಾರಣಾಧಿಕಾರಿ ಜೋಸೆಫ್, ಪಶುಸಂಗೋಪನಾ ಅಧಿಕಾರಿ ಮಂಜು ನಾಯ್ಕ್, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕರು ಧನಂಜಯ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಮತ ಚಲಾವಣೆಯ ಬಗ್ಗೆ ಮತಯಂತ್ರದ ಮೂಲಕ ಪ್ರಾಯೋಗಿಕವಾಗಿ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಪ.ಪೂ. ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು, ಕಂದಾಯ ಇಲಾಖೆಯ ಸಿಬ್ಬಂದಿ ವರ್ಗ, ನಗರ ಪಂಚಾಯತ್ ಸಿಬ್ಬಂದಿ ವರ್ಗ, ತಾಲೂಕು ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಾಡಗೀತೆ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮ ರಾಜೇಶ್ ಕೋಟ್ಯಾನ್ ಸ್ವಾಗತಿಸಿ, ತಾಲೂಕು ಸಂಯೋಜಕ ಜಯಾನಂದ ನಿರೂಪಿಸಿದರು.

Exit mobile version