Site icon Suddi Belthangady

ಮದ್ದಡ್ಕ ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ವತಿಯಿಂದ 3 ಜೋಡಿ ಸರಳ ಸಾಮೂಹಿಕ ವಿವಾಹ

ಬೆಳ್ತಂಗಡಿ: ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮದ್ದಡ್ಕ ಇದರ ವತಿಯಿಂದ ಏಕದಿನ ಪ್ರಭಾಷಣ ಹಾಗೂ ಎರಡನೇ ವರ್ಷದ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮೂರು ಅರ್ಹ ಕುಟುಂಬದ ಹೆಣ್ಣು ಮಕ್ಕಳು ನವಜೀವನಕ್ಕೆ ಕಾಲಿರಿಸಿದರು.

ನೂರುಲ್ ಹುದಾ ಜುಮ್ಮಾ ಮಸ್ಜಿದ್ ಪಕ್ಕದ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆದ ಸರಳ ಸಾಮೂಹಿಕ ವಿವಾಹ ಸಮಾರಂಭದ ನೇತೃತ್ವವನ್ನು ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ವಹಿಸಿದ್ದರು. ತಾಲೂಕು ಸಹಾಯಕ ಖಾಝಿ ಸಾದಾತ್ ತಂಙಳ್ ಉದ್ಘಾಟನೆ ನೆರವೇರಿಸಿದರು. ಜಾಮಿಯಾ ಸ‌ಅದಿಯಾ ಅರೆಬಿಯಾ ಕಾಸರಗೋಡು ಇದರ ಪ್ರಾಚಾರ್ಯ ಕೆ.ಸಿ ರೋಡ್ ಹುಸೈನ್ ಸ‌ಅದಿ ಮುಖ್ಯ ಪ್ರಭಾಷಣ ನಡೆಸಿದರು.

ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಅಧ್ಕಕ್ಷ ಎಂ ಹೈದರ್ ಮದ್ದಡ್ಕ ವಹಿಸಿದ್ದರು. ಸ್ಥಳೀಯ ಖತೀಬ್ ಹಸನ ಮುಬಾರಕ್ ಸಖಾಫಿ ವಿವಾಹ ಖುತುಬಾ ಪಾರಾಯಣ ನಡೆಸಿದರು.

ಸಮಾರಂಭದಲ್ಲಿ ಖದೀಜತುಲ್ ಖುಬ್‌ರಾ- ಮುಹಮ್ಮದ್ ರಫೀಕ್, ಆಯಿಶತ್ ಸ್ವಾಬಿರಾ- ಮುಹಮ್ಮದ್ ಝಹೀರ್ ಫಾಳಿಲಿ, ಹಾಗೂ ಅಫ್ರೀನ್ – ಮುಹಮ್ಮದ್ ಜಾವಿದ್ ಇವರನ್ನು ವರಿಸುವ ಮೂಲಕ ವಿವಾಹ ಕಾರ್ಯವು ಸಂಪನ್ನಗೊಂಡಿತು.

ನೂತನ ವಧುಗಳಿಗೆ ತಲಾ 3 ಪವನ್ ಚಿನ್ನಾಭರಣ ಮತ್ತು ವಸ್ರ್ತ ಖರೀದಿಗೆ 15 ಸಾವಿರ ರೂ. ನಗದು, ಹಾಗೂ ವರರಿಗೆ ವಾಚ್, ವಸ್ರ್ತ ಖರೀದಿಗೆ10 ಸಾವಿರ ರೂ. ನಗದು ನೀಡಲಾಯಿತು.
ಸಮಾರಂಭದಲ್ಲಿ ಖಾಝಿ ಕೂರತ್ ತಂಙಳ್ ರನ್ನು ವಿಶೇಷ ನಿಲುವಂಗಿ ತೊಡಿಸಿ ಸನ್ಮಾನಿಸಲಾಯಿತು.

ಸಾದಾತ್ ತಂಙಳ್, ವಾದಿ ಇರ್ಫಾನ್ ತಂಙಳ್, ಎಸ್. ಎಂ ತಂಙಳ್, ಮದ್ದಡ್ಮ ಜಮಾಅತ್ ಅಧ್ಯಕ್ಷ ಅಶ್ರಫ್ ಚಿಲಿಂಬಿ, ಡಾ. ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ, ಎಂ ಉಮರಬ್ಬ ಮದ್ದಡ್ಕ, ವಿವಾಹ ಸಮಿತಿ ಅಧ್ಯಕ್ಷ ಉಸ್ಮಾನ್ ಹಾಜಿ ಆಲಂದಿಲ, ಎಂ ಸಿರಾಜ್ ಚಿಲಿಂಬಿ, ಮಹಮ್ಮದ್ ರಫೀಕ್ ಅಹ್ಸನಿ ಒಕ್ಕೆತ್ತೂರು, ಮುಹಮ್ಮದ್ ಶರೀಫ್ ಲೆತ್ವೀಫಿ, ಮುಹಮ್ಮದ್ ಶರೀಫ್ ಮದನಿ, ಮುಹಮ್ಮದ್ ಸಿನಾನ್ ಸಖಾಫಿ, ಇಬ್ರಾಹಿಂ ಮುಸ್ಲಿಯಾರ್, ಅಬ್ದುಲ್ ರಝಾಕ್ ಸಖಾಫಿ, ಮುಹಮ್ಮದ್ ಶಫೀಕ್ ಮದನಿ, ಮುಹಮ್ಮದ್ ಬಶೀರ್ ಲೆತ್ವೀಫಿ, ದಾವೂದ್ ಗುರುವಾಯನಕೆರೆ, ರಿಯಾಝ್ ಸಬರಬೈಲು, ಇರ್ಷಾದ್ ಪೊಲೀಸ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಧಾರ್ಮಿಕ ಪ್ರವಚನದಂಗವಾಗಿ ತೋಕೆ ಸಖಾಫಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಯ್ಯಿದ್ ಕಾಜೂರು ತಂಙಳ್ ನೇತೃತ್ವ ವಹಿಸಿದ್ದರು. ಯಾಕೂಬ್ ಮುಸ್ಲಿಯಾರ್ ಪಣಕಜೆ ಸಹಿತ ಸ್ಥಳೀಯ ಹಾಗೂ ಅನೇಕ ಮಂದಿ ಆಹ್ವಾನಿತ ಗಣ್ಯರು ಭಾಗಿಯಾಗಿದ್ದರು.

ರಾಝಿಯುದ್ದೀನ್ ಸಬರಬೈಲು ವರದಿ ವಾಚಿಸಿದರು.ಉಮರ್ ಮಾಸ್ಟರ್ ಮದ್ದಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು.ಎಚ್.ಎಸ್ ಹಸನಬ್ಬ ಸಹಿತ ಪದಾಧಿಕಾರಿಗಳು ಸಹಕರಿಸಿದರು. ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ‌ ನಿರೂಪಿಸಿದರು.

Exit mobile version